ADVERTISEMENT

ನರಸಿಂಹರಾಜಪುರ | ಅಡಿಕೆ ಕಳ್ಳತನ ಮಾಡಿದ ದಂಪತಿ: ಆರೋಪಿಗಳ ಸಹಿತ ಅಡಿಕೆ ವಶ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 16:28 IST
Last Updated 22 ಡಿಸೆಂಬರ್ 2024, 16:28 IST
ನರಸಿಂಹರಾಜಪುರ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಕಾರು ಹಾಗೂ ಅಡಿಕೆ
ನರಸಿಂಹರಾಜಪುರ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಕಾರು ಹಾಗೂ ಅಡಿಕೆ   

ನರಸಿಂಹರಾಜಪುರ: ತಾಲ್ಲೂಕು ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಬೇರೆಡೆ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮುತ್ತಿನಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಹಾಗೂ ಬೇರೆಡೆ ಅಡಿಕೆ ಕಳ್ಳತನ ಮಾಡಿದ್ದ ಶಿವಮೊಗ್ಗ ತಾಲ್ಲೂಕು ಲಕ್ಕಿನಕೊಪ್ಪ ಗ್ರಾಮದಲ್ಲಿ ವಾಸವಾಗಿರುವ ಮಹಮ್ಮದ್ ಸಾದಿಕ್ ಹಾಗೂ ಸಲ್ಮಾ ದಂಪತಿ ಬಂಧಿತ ಆರೋಪಿಗಳು. ಡಿ. 21ರಂದು ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳಿಂದ 202.87ಕೆ.ಜಿ ಒಣ ಅಡಿಕೆ ಹಾಗೂ ಮಾರುತಿ ಜೆನ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಅಂದಾಜು ಮೌಲ್ಯ ₹1.60 ಲಕ್ಷವಾಗಿದೆ.

ನರಸಿಂಹರಾಜಪುರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಬಿ.ಎಸ್.ನಿರಂಜನಗೌಡ, ಜ್ಯೋತಿ, ಸಿಬ್ಬಂದಿ ಪರಮೇಶ್, ಬಿನು, ಮಧು, ಅಮಿತ್ ಚೌಗಲೆ, ದೇವರಾಜ್, ಕೌಶಿಕ್, ನವೀನ್ ಕುಮಾರ್ ಕಾರ್ಯಾಚರಣೆಯಲ್ಲಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.