ADVERTISEMENT

ಡಿಸಿಸಿ ಬ್ಯಾಂಕ್‌ ಚುನಾವಣೆ: 43 ನಾಮಪತ್ರ ಸಲ್ಲಿಕೆ

ನಾಮಪತ್ರ ವಾಪಸ್‌ ಪಡೆಯಲು ಇದೇ 23ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 16:43 IST
Last Updated 21 ಸೆಪ್ಟೆಂಬರ್ 2020, 16:43 IST
ಚಿಕ್ಕಮಗಳೂರಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌
ಚಿಕ್ಕಮಗಳೂರಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌   

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳಿಗೆ 29 ಮಂದಿ 43 ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆ ದಿನವಾಗಿತ್ತು. ನಾಮಪತ್ರಗಳ ಪರಿಶೀಲನೆ ಮತ್ತು ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಪ್ರಕಟಣೆ ಪ್ರಕ್ರಿಯೆ 22ರಂದು ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಇದೇ 23 ಕೊನೆ ದಿನ.

ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಪರವಾಗಿ ತಲಾ ಎರಡು, ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಸಂಘಗಳ ಪರವಾಗಿ ತಲಾ ಒಂದು, ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಪರವಾಗಿ ಎರಡು, ಹಾಗೂ ಇತರ ಸಂಘಗಳ ಪರವಾಗಿ ಒಂದು ಸ್ಥಾನಕ್ಕೆ ಆಯ್ಕೆ ನಡೆಯಬೇಕಿದೆ. ಇದೇ 29ಕ್ಕೆ ಚುನಾವಣೆ ನಿಗದಿಯಾಗಿದೆ.

ADVERTISEMENT

ಚಿಕ್ಕಮಗಳೂರು ಪ್ಯಾಕ್ಸ್‌ನ ಎರಡು ಸ್ಥಾನಗಳಿಗೆ ನಾಲ್ವರು ಎಂಟು ನಾಮಪತ್ರ, ಕಡೂರು ಪ್ಯಾಕ್ಸ್‌ನ ಎರಡು ಸ್ಥಾನಗಳಿಗೆ ನಾಲ್ವರು ಐದು ನಾಮಪತ್ರ, ತರೀಕೆರೆ ಪ್ಯಾಕ್ಸ್‌ನ ಎರಡು ಸ್ಥಾನಗಳಿಗೆ ನಾಲ್ವರು ಆರು ನಾಮಪತ್ರ, ಮೂಡಿಗೆರೆ ಪ್ಯಾಕ್ಸ್‌ ಒಂದು ಸ್ಥಾನಕ್ಕೆ ಮೂವರು, ಕೊಪ್ಪ ಪ್ಯಾಕ್ಸ್‌ನ ಒಂದು ಸ್ಥಾನಕ್ಕೆ ಮೂವರು, ಶೃಂಗೇರಿಯ ಪ್ಯಾಕ್ಸ್‌ನ ಒಂದು ಸ್ಥಾನಕ್ಕೆ ಇಬ್ಬರು ಮೂರು ನಾಮಪತ್ರ, ಎನ್‌.ಆರ್‌.ಪುರ ಪ್ಯಾಕ್ಸ್‌ ಒಂದು ಸ್ಥಾನಕ್ಕೆ ಒಬ್ಬರು, ಹಾಲು ಉತ್ಪಾದಕರ ಸಂಘಗಳ ಎರಡು ಸ್ಥಾನಗಳಿಗೆ ನಾಲ್ವರು ಐದು ನಾಮಪತ್ರ, ಇತರ ಸಂಘಗಳ ಒಂದು ಸ್ಥಾನಕ್ಕೆ ನಾಲ್ವರು ಒಂಬತ್ತು ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.