
ಚಿಕ್ಕಮಗಳೂರು: ಶಿಕ್ಷಣ ಕೇವಲ ನೌಕರಿಗಾಗಿ ಅಲ್ಲ. ವಿದ್ಯೆ, ವಿನಯ ಹಾಗೂ ಬದುಕುವ ದಾರಿ ಕಲಿಸುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಜೆವಿಎಸ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಹೆಚ್ಚುತ್ತಿದೆ. ಇದರ ನಡುವೆ ಮಾದಕ ವಸ್ತುಗಳ ಸೇವನೆಯಂಥ ದುಶ್ಚಟಗಳು ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುವ ಸಾಧ್ಯತೆ ಹೆಚ್ಚಿವೆ. ಶಾಲಾ, ಕಾಲೇಜು ಬಳಿ ಇರುವ ಅಂಗಡಿ, ಕ್ಯಾಂಟೀನ್‌ಗಳಿಗೆ ಪೊಲೀಸರನ್ನು ಕಳುಹಿಸಿ ಪರಿಶೀಲಿಸಬೇಕಾದ ಸಂದರ್ಭ ಬಂದಿರುವುದು ವಿಷಾದನೀಯ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾನತಾಡಿ, ‘ಮೊಬೈಲ್ ಫೋನ್‌ಗಳು ಬಂದ ನಂತರ ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕಾಗಿದೆ’ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ‘ಸಂಸ್ಥೆಯು 44 ವರ್ಷಗಳಿಂದ ಯಶಸ್ವಿಯಾಗಿ ನಡೆದು ಬಂದಿದೆ. ಇದರಲ್ಲಿ ನಮ್ಮ ಹಿರಿಯರ ಶ್ರಮ ಸಾಕಷ್ಟಿದೆ’ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಮಾಜಿ ಅದ್ಯಕ್ಷ ಕಚ್ಚೋಡಿ ಶ್ರೀನಿವಾಸ್ ನಿರ್ದೇಶಕರಾದ ಕೆ.ಪಿ.ರಾಜೇಂದ್ರ, ಕೆ.ಯು.ರತೀಶ್ ಕುಮಾರ್, ಹರಿಣಾಕ್ಷಿ ನಾಗರಾಜ್, ಎಂ.ಅಶೋಕ್, ಎಂ.ಬಿ.ಸತೀಶ್, ಯು.ಪಿ.ಮನುಕುಮಾರ್, ಎಚ್.ಕೆ.ನವೀನ್, ಪಿ.ರಾಜು, ಎಚ್.ಎಸ್.ಮೋಹನ್, ಕೆ.ಬಿ.ಸತೀಶ್, ಭವ್ಯ ನಟೇಶ್, ಜೆ.ಪಿ.ಹೊಯ್ಸಳ, ಐ.ವಿ.ಮಂಜುಚೇತನ್ ಮತ್ತು ಮಹಿಳಾ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ, ಶಾಲಾ ಮುಖ್ಯ ಶಿಕ್ಷಕ ವಿಜಿತ್, ಕಾಲೇಜು ಪ್ರಾಂಶುಪಾಲೆ ತೇಜಸ್ವಿನಿ, ಸಿಇಒ ಕುಳ್ಳೇಗೌಡ, ವ್ಯವಸ್ಥಾಪಕ ತೇಜಸ್‌ಮೂರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.