ತರೀಕೆರೆ: 9 ವರ್ಷಗಳಿಂದ ನಿರಂತರ ಹೋರಾಟ ಮಾಡಿದರೂ, ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ರೈತರು ಟೋಲ್ ನಿರ್ಮಿಸಿ ಪ್ರತಿ ವಾಹನದಿಂದ ₹1 ಸಂಗ್ರಹ ಮಾಡಲು ನಿರ್ಧರಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶ್ರೀಗಂಧ ಬೆಳೆದ 22 ಮಂದಿಯಿಂದ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಆ ಜಾಗದ ಶ್ರೀಗಂಧದ ಮರವೊಂದಕ್ಕೆ ಕೆಎಸ್‌ಡಿಎಲ್ ₹ 2.44 ಲಕ್ಷ ನಿಗದಿ ಮಾಡಿದೆ. ಈ ದರ ನೀಡಲು ಹಿಂದೇಟು ಹಾಕಿದ ಪ್ರಾಧಿಕಾರ ಅರಣ್ಯ ಇಲಾಖೆ ನಿಗದಿಪಡಿಸಿರುವ ₹ 420 ಪರಿಹಾರವಾಗಿ ನೀಡಲು ಮುಂದಾಗಿದೆ ಎಂದರು.
ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡಲು ಪ್ರಾಧಿಕಾರ ಮೀನಾಮೇಷ ಎಣಿಸುತ್ತಿದೆ. ತೆಂಗು, ಮಾವು, ನಿಂಬೆ ಗಿಡಕ್ಕಿಂತಲೂ ಕಡಿಮೆ ಬೆಲೆಯನ್ನು ಶ್ರೀಗಂಧಕ್ಕೆ ನಿಗದಿಪಡಿಸಲಾಗಿದೆ. ಇದರಿಂದ ಸಂತ್ರಸ್ತರಿಗೆ ಅನ್ಯಾಯವಾಗಲಿದೆ ಎಂದರು.
ಶ್ರೀಗಂಧ ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಟಿ.ಎನ್ ವಿಶುಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ್, ಮುಖಂಡ ಓಂಕಾರಪ್ಪ, ಮೂರ್ತಿ, ಸವಿತಾ, ನವೀನ್, ಪ್ರತಾಪ್ ಕುಮಾರ್, ತಿಪ್ಪೇಶಪ್ಪ, ಕುಪ್ಪಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.