ADVERTISEMENT

ಚಿಕ್ಕಮಗಳೂರು ನಗರದ ಬಟ್ಟೆ ಮಳಿಗೆಗೆ ಬೆಂಕಿ: ಭಾರಿ ನಷ್ಟ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 8:39 IST
Last Updated 26 ಜುಲೈ 2020, 8:39 IST
ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳ
ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳ   

ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯ ಬೆಲ್ಮೊಂಟ ಬಟ್ಟೆ ಮಳಿಗೆಯಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಮಳಿಗೆಯಲ್ಲಿದ್ದ ಬಹಳಷ್ಟು ವಸ್ತುಗಳು ಸುಟ್ಟಿವೆ. ಅಗ್ನಿಶಾಮಕ ಸಿಬ್ಬಂದಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಮಳಿಗೆಯಲ್ಲಿ ಹೊಗೆ ಕಂಡು ಪಾದಚಾರಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

ಮಳಿಗೆಯಲ್ಲಿದ್ದ ಪೀಠೋಪಕರಣ, ಬಟ್ಟೆ, ಡಿಯೋಡ್ರೆಂಟ್ ಮೊದಲಾದವು ಬಹುತೇಕ ಸುಟ್ಟಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.