ADVERTISEMENT

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆ, ನೆಲಕ್ಕುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 12:55 IST
Last Updated 15 ಜುಲೈ 2021, 12:55 IST
ಜಯಪುರ– ಬಸರೀಕಟ್ಟೆ ಮಾರ್ಗದ ಅಬ್ಬಿಕಲ್ಲು ಬಳಿ ರಸ್ತೆ ಅಡ್ಡಲಾಗಿ ಉರುಳಿದ್ದ ಮರ ತೆರವುಗೊಳಿಸುತ್ತಿರುವುದು.
ಜಯಪುರ– ಬಸರೀಕಟ್ಟೆ ಮಾರ್ಗದ ಅಬ್ಬಿಕಲ್ಲು ಬಳಿ ರಸ್ತೆ ಅಡ್ಡಲಾಗಿ ಉರುಳಿದ್ದ ಮರ ತೆರವುಗೊಳಿಸುತ್ತಿರುವುದು.   

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಗುರುವಾರ ಧಾರಾಕಾರವಾಗಿ ಮಳೆ ಸುರಿದಿದೆ. ವಿವಿಧೆಡೆ ವಿದ್ಯುತ್‌ ಕಂಬಗಳು, ಮರಗಳು ನೆಲಕ್ಕುರುಳಿವೆ.

ಮೂಡಿಗೆರೆ ತಾಲ್ಲೂಕಿನ ದರ್ಶನ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಹಾನಿಯಾಗಿದೆ. ಜಯಪುರ– ಬಸರೀಕಟ್ಟೆ ಮಾರ್ಗದಲ್ಲಿ ಅಬ್ಬಿಕಲ್ಲು ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು. ಬಸರೀಕಟ್ಟೆಯ ಪ್ರೌಢಶಾಲೆಯ ಮುಂಭಾಗದ ರಸ್ತೆ ಬದಿಯ ಮಣ್ಣು ಕುಸಿದಿದೆ.

‘ಮಳೆಗಾಳಿಗೆ ಗಡೀಕಲ್ಲು, ಹರಿಹರಪುರ, ಬಸರೀಕಟ್ಟೆ, ಕಿಗ್ಗಾ, ಬೇಗಾರು, ಕೊಗ್ರೆ ಭಾಗದಲ್ಲಿ 50ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, ನಾಲ್ಕು ಟ್ರಾನ್ಸಫಾರ್ಮರ್‌ಗಳು ನೆಲಕ್ಕುರುಳಿವೆ’ ಎಂದು ಮೆಸ್ಕಾಂ ಕೊಪ್ಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿದ್ದೇಶ್‌ ತಿಳಿಸಿದರು.

ಕಿಗ್ಗಾ– 18.4, ಶೃಂಗೇರಿ– 13.3, ಬಸರೀಕಟ್ಟೆ– 13.3, ಜಯಪುರ–12.3, ಕಮ್ಮರಡಿ– 11.4 , ಕೊಟ್ಟಿಗೆಹಾರ– 9.7 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.