ತರೀಕೆರೆ: ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ತರೀಕೆರೆ ವತಿಯಿಂದ ಆಪರೇಷನ್ ಸಿಂಧೂರ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ 8ನೇ ವರ್ಷದ ಹಿಂದೂ ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮ ಮತ್ತು ಶೋಭಾಯಾತ್ರೆ ಪಟ್ಟಣದಲ್ಲಿ ಬುಧವಾರ ನಡೆಯಿತು.
ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಬಂದ ಶೋಭಾಯಾತ್ರೆಯಲ್ಲಿ ಮಂಗಳ ವಾದ್ಯ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಮಹಾರಾಷ್ಟ್ರದ ನಾಸಿಕ್ ಡೋಲು ನಾದ, ಇತ್ಯಾದಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಸಮಿತಿ ಅಧ್ಯಕ್ಷ ಟಿ.ಎಂ. ಭೋಜರಾಜ್, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಚನ್ನಬಸಪ್ಪ, ಮಾಜಿ ಶಾಸಕ ಡಿ.ಎಸ್. ಸುರೇಶ್, ಎಸ್.ಎಂ. ನಾಗರಾಜ್, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎನ್. ಮಂಜುನಾಥ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಆರ್. ದೃವಕುಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ.ಆರ್. ಆನಂದಪ್ಪ, ಜಿ.ಪಂ. ಮಾಜಿ ಸದಸ್ಯ ಕೆ.ಎಚ್. ಮಹೇಂದ್ರ, ಮುಖಂಡರಾದ ಎಚ್.ಎಂ. ಗೋಪಿಕೃಷ್ಣ, ಭರತ್ ಅಂಚೆ ಇದ್ದರು. ಪಟ್ಟಣದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ತರೀಕೆರೆ ಪಟ್ಟಣದ ಬಿ.ಎಚ್. ರಸ್ತೆಯಲ್ಲಿ ಶೋಭಾಯಾತ್ರೆ ಸಾಗುವಾಗ ಬಸ್‌ಗಳನ್ನು ಪಟ್ಟಣದ ಹೊರಹೊಲಯದಲ್ಲಿ ಹಾದು ಹೋಗಿರುವ ಎನ್.ಎಚ್. 206ರ ಬೈಪಾಸ್‌ನ ಹಳಿಯೂರು ಬಳಿ ಇರುವ ಕಡೂರು ವಾಟರ್ ಸಪ್ಲೆ ಮತ್ತು ಲಕ್ಕವಳ್ಳಿ ಕ್ರಾಸ್ ಬಳಿ ನಿಲುಗಡೆಗೊಳಿಸಿದ ಕಾರಣ ತರೀಕೆರೆ ನಗರಕ್ಕೆ ಬರುವ ಪ್ರಯಾಣಿಕರಿಗೆ ತುಸು ತೊಂದರೆಯುಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.