
ಪ್ರಾತಿನಿಧಿಕ ಚಿತ್ರ
ಕಡೂರು: ಪಟ್ಟಣದ ಕೋಟೆ ಬಡಾವಣೆಯ ಅರಸು ಮಕ್ಕಳ ಬೀದಿಯಲ್ಲಿರುವ, ವಿಜಯಕುಮಾರ್ ಎಂಬುವರ ಮನೆಗೆ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ಚಿನ್ನದ ಆಭರಣ, ಹಣವನ್ನು ಕಳವು ಮಾಡಿದ್ದಾರೆ.
ವಿಜಯಕುಮಾರ್ ಅವರು ಪಟ್ಟಣದ ಜೆ.ಪಿ. ಲಾಡ್ಜ್ ಹಿಂಭಾಗದ ಮನೆಯಲ್ಲಿ ಬಾಡಿಗೆಗೆ ಇದ್ದು, ಕೋಟೆ ಬಡಾವಣೆಯ ಮನೆಯಲ್ಲಿ ಅವರ ತಾಯಿ ವಾಸ ಮಾಡುತ್ತಿದ್ದರು. ನಿತ್ಯ ಸಂಜೆ ತಾಯಿಯನ್ನು ಮಗ ತನ್ನ ಬಾಡಿಗೆ ಮನೆಗೆ ರಾತ್ರಿ ವೇಳೆ ಕರೆದೊಯ್ಯುತ್ತಿದ್ದರು. ಗುರುವಾರ ರಾತ್ರಿ ಎಂದಿನಂತೆ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ಹೋಗಿ ನೋಡಿದಾಗ ಕಳ್ಳರು ಮನೆ ಬೀಗ ಒಡೆದು, ಮನೆಯಲ್ಲಿದ್ದ ನಾಲ್ಕು ಬೀರುಗಳನ್ನು ಹುಡುಕಾಡಿ ಅದರಲ್ಲಿದ್ದ ಬಂಗಾರದ ಉಂಗುರ, ಕಿವಿಯೋಲೆ, ಚಿನ್ನದ ಚೈನ್ ಮತ್ತು ₹20 ಸಾವಿರ ಹಣ ಕಳವು ಮಾಡಿದ್ದಾರೆ.
ಒಟ್ಟು ₹1.40 ಲಕ್ಷ ಮೌಲ್ಯದ ಆಭರಣ, ಹಣ ಕಳವು ಮಾಡಿದ್ದು ಅದನ್ನು ಹುಡುಕಿಕೊಡುವಂತೆ ವಿಜಯಕುಮಾರ್ ಅವರು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.