ADVERTISEMENT

ಕಳಸ: ಕಳಕೋಡು ಶಾಲೆಗೆ ನೀರಿನ ಕೊರತೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 13:37 IST
Last Updated 18 ಮಾರ್ಚ್ 2025, 13:37 IST
ಕಳಸ ತಾಲ್ಲೂಕಿನ ಕಳಕೋಡು ಶಾಲೆಗೆ ಮಕ್ಕಳು ಸಮೀಪದ ತೋಟವೊಂದರ ಗುಂಡಿಯಿಂದ ನೀರು ಎತ್ತುತ್ತಿರುವುದು
ಕಳಸ ತಾಲ್ಲೂಕಿನ ಕಳಕೋಡು ಶಾಲೆಗೆ ಮಕ್ಕಳು ಸಮೀಪದ ತೋಟವೊಂದರ ಗುಂಡಿಯಿಂದ ನೀರು ಎತ್ತುತ್ತಿರುವುದು   

ಕಳಸ: ಕಳಕೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರಿನ ಕೊರತೆ ಆಗಿದ್ದು, ಮಕ್ಕಳು ಪಕ್ಕದ ತೋಟದ ಹೊಂಡವೊಂದರಿಂದ ನೀರು ತರುವ ಪರಿಸ್ಥಿತಿ ಎದುರಾಗಿದೆ.

ಬಿಸಿಯೂಟಕ್ಕೆ ಮತ್ತು ಶೌಚಾಲಯಕ್ಕೆ ಮಕ್ಕಳು ಮತ್ತು ಶಿಕ್ಷಕರು ನೀರನ್ನು ಹೊತ್ತು ತರುತ್ತಾರೆ. ಆದರೆ, ಆ ನೀರು ಕೂಡ ಶುಚಿಯಾಗಿಲ್ಲ.

ಕಳೆದ 2 ವರ್ಷದಿಂದಲೂ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗೆ ನೀರಿನ ಸೌಲಭ್ಯಕ್ಕಾಗಿ ಅರ್ಜಿ ಕೊಟ್ಟಿದ್ದೇವೆ. ಆದರೆ, ಈವರೆಗೂ ಫಲ ಸಿಕ್ಕಿಲ್ಲ. ದೂರದಿಂದ ನೀರು ಹೊತ್ತು ತರುವುದು ಅನಿವಾರ್ಯವಾಗಿದೆ. ಜೊತೆಗೆ ಆ ನೀರು ಕೂಡ ಶುಚಿ ಆಗಿಲ್ಲ. ಮಕ್ಕಳ ಆರೋಗ್ಯಕ್ಕೆ ಹಾನಿ ಆದರೆ ಯಾರು ಹೊಣೆ ಎಂದು ಪೋಷಕರು ಅಸಮಾಧಾನ ಹೊರಹಾಕುತ್ತಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.