ADVERTISEMENT

ಇಂದು ಸಿದ್ದರಾಮಯ್ಯ ಕಡೂರಿಗೆ: ಶಾಸಕ ಕೆ.ಎಸ್.ಆನಂದ್

ಜಯಪ್ರಕಾಶ್‌ ಹೆಗ್ಡೆ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 23:55 IST
Last Updated 21 ಏಪ್ರಿಲ್ 2024, 23:55 IST
ಕೆ.ಎಸ್.ಆನಂದ್
ಕೆ.ಎಸ್.ಆನಂದ್   

ಕಡೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಕಡೂರಿಗೆ ಬರುತ್ತಿದ್ದು, ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ’ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಭಾನುವಾರ ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗೆ  ಕಡೂರು ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿಯಿದೆ. ಭಧ್ರಾ ಮೇಲ್ದಂಡೆ ಯೋಜನೆಗೆ ₹5300 ಕೋಟಿ ನೀಡುವ ಮತ್ತು ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುತ್ತೇವೆಂದ ಬಿಜೆಪಿ ಸರ್ಕಾರ ಅದನ್ನುಮಾಡಲಿಲ್ಲ.ಸಿದ್ದರಾಮಯ್ಯನವರು ಆ ಯೋಜನೆಗೂ ಹಣ ನೀಡಿದರು. ಭಧ್ರಾ ಉಪಕಣಿವೆ ಯೋಜನೆಯಲ್ಲಿ ಕಡೂರಿನ ಸುಮಾರು 79 ಕೆರೆಗಳನ್ನು ತುಂಬಿಸುವ ಯೋಜನೆಯ ನಾಲ್ಕು ಹಂತದ ₹1280 ಕೋಟಿ ವೆಚ್ಚದ ಕಾಮಗಾರಿಗೆ ಕೇವಲ ಆಡಳಿತಾತ್ಮಕ ಅನುಮೋದನೆ ಮಾತ್ರ ನೀಡಲಾಗಿತ್ತು.ಯಾವುದೇ ಹಣ ಮೀಸಲಿಟ್ಟಿರಲಿಲ್ಲ. ಈ ಯೋಜನೆಯನ್ನು ನಬಾರ್ಡ್ ಯೋಜನೆಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿದಾಗ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿ, ಯೋಜನೆಯನ್ನು ಸೇರಿಸಲು ಶಿಫಾರಸ್ಸು ಮಾಡಿ ಡಿಪಿಆರ್ ತಯಾರಿಸಲು ಸೂಚಿಸಿದ್ದಾರೆ’ ಎಂದರು.

ಸಿದ್ದರಾಮಯ್ಯ ಮಧ್ಯಾಹ್ನ 1 ಗಂಟೆಗೆ ಎಪಿಎಂಸಿ ಆವರಣದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದು, ಸಚಿವ ಕೆ.ಜೆ.ಜಾರ್ಜ್ ಮತ್ತು ಕೆ.ಎನ್.ರಾಜಣ್ಣ ಸಹ ಭಾಗವಹಿಸುವರು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಬಾಸೂರು ಚಂದ್ರಮೌಳಿ, ಆಸಂದಿ‌ ಕಲ್ಲೇಶ್, ಪಿ.ಎಂ.ಪ್ರಸನ್ನ, ಟೊಮೇಟೋ ಗೌಡ, ರೇಣುಕಾರಾಧ್ಯ, ಆಬೀದ್ ಪಾಶಾ, ಗುಮ್ಮನಹಳ್ಳಿ ಅಶೋಕ್, ಕಂಸಾಗರ ರೇವಣ್ಣ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.