
ಪ್ರಜಾವಾಣಿ ವಾರ್ತೆಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಬಾಳೆಹೊನ್ನೂರು (ಚಿಕ್ಕಮಗಳೂರು ಜಿಲ್ಲೆ): ಇಲ್ಲಿನ ಮಸೀದಿಕೆರೆ ಬಳಿ ಮೃತಪಟ್ಟಿದ್ದ ಹಿಂದೂ ಯುವಕನ ಶವ ಸಂಸ್ಕಾರವನ್ನು ಮುಸ್ಲಿಂ ಯುವಕರು ನಡೆಸಿದರು.
ಮೆಣಸುಕೊಡಿಗೆ ನಿವಾಸಿ ರಮೇಶ್ ಮಸೀದಿಕೆರೆಯ ಪಾಳುಬಿದ್ದ ಮನೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಮೃತರಾಗಿದ್ದರು. ದುರ್ವಾಸನೆ ಹರಡಿದ್ದರಿಂದ ಅವರ ಸಾವಿನ ಬಗ್ಗೆ ಗೊತ್ತಾಗಿತ್ತು. ಸಂಬಂಧಿಕರು ಶವ ಸಂಸ್ಕಾರಕ್ಕೆ ಮುಂದಾಗಿರಲಿಲ್ಲ.
ತುರ್ತು ರಕ್ಷಣಾ ಪಡೆಯ ಮುಖ್ಯಸ್ಥ ಅಸ್ಲಾಂ ಅವರ ಜತೆಗೂಡಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಶಾಫಿ, ಮಸೀದಿಕೆರೆ ರಫೀಕ್, ಸುಲೈಮಾನ್, ನೀರುಗಂಟಿ ನಾಗೇಂದ್ರ ಅವರೆಲ್ಲ ಸೇರಿ ಆಂಬುಲೆನ್ಸ್‌ನಲ್ಲಿ ಬೈರೇಗುಡ್ಡದ ಹಿಂದೂ ರುದ್ರಭೂಮಿಗೆ ಒಯ್ದು ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದರು.
ಪೊಲೀಸ್ ಅಧಿಕಾರಿಗಳಾದ ಮಂಜುನಾಥ್ ಹಾಗೂ ಧರ್ಮರಾಜ್ ಸಹ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.