ADVERTISEMENT

ಉಮಾಮಹೇಶ್ವರ ದೇವಸ್ಥಾನದಲ್ಲಿ ಹನುಮ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 14:35 IST
Last Updated 14 ಡಿಸೆಂಬರ್ 2024, 14:35 IST
ನರಸಿಂಹರಾಜಪುರದ ಅಗ್ರಹಾರದ ಉಮಾಮಹೇಶ್ವರ ದೇವಸ್ಥಾನದ ಆವರಣದಲ್ಲಿರುವ ಆಂಜನೇಯ ಸ್ವಾಮಿಗೆ ಹನುಮಜಯಂತಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು
ನರಸಿಂಹರಾಜಪುರದ ಅಗ್ರಹಾರದ ಉಮಾಮಹೇಶ್ವರ ದೇವಸ್ಥಾನದ ಆವರಣದಲ್ಲಿರುವ ಆಂಜನೇಯ ಸ್ವಾಮಿಗೆ ಹನುಮಜಯಂತಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು   

ನರಸಿಂಹರಾಜಪುರ: ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ದೇವಸ್ಥಾನದಲ್ಲಿ ಲಲಿತ ಭಜನಾ ಮಂಡಳಿಯ ನೇತೃತ್ವದಲ್ಲಿ 2 ದಿನಗಳ ಕಾಲ ಹನುಮ ಜಯಂತಿ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಶ್ರೀಆಂಜನೇಯಸ್ವಾಮಿಗೆ ಗುರುವಾರ ಪವಮಾನ ಅಭಿಷೇಕ, ಅಷ್ಟೋತ್ತರ, ವಿಷ್ಣು ಸಹಸ್ರನಾಮ, ಭಜನಾ ಸೇವೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು. ಸಂಜೆ ಲಲಿತ ಭಜನಾ ಮಂಡಳಿಯಿಂದ ಭಜನೆ, ವಿಶೇಷ ಪೂಜೆ, ಅಷ್ಟಾವಧಾನ ಸೇವೆ ಪ್ರಸಾದ ವಿನಿಯೋಗ ನಡೆದವು.

ಶುಕ್ರವಾರ ಬೆಳಿಗ್ಗೆ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ, ವಿಷ್ಣು ಸಹಸ್ರನಾಮ, ರಾಮ ರಕ್ಷ ಸ್ತೋತ್ರ, ಹನುಮಾನ್ ಚಾಲೀಸ್ ಪಠಣ, ಮಾರುತಿ ಹೋಮ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ವಿಷ್ಣು ಸಹಸ್ರನಾಮ ಪಠಣ, ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ, ತಾಳ ವಾದ್ಯಸೇವೆ, ಸಂಗೀತ ಸೇವೆ, ಭಜನೆ ಸೇವೆ ಜರುಗಿತು. ವೇ.ಬ್ರ. ಕೃಷ್ಣಭಟ್ಹಾಗೂ ಪ್ರಸನ್ನ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು.

ADVERTISEMENT

ಲಲಿತ ಭಜನಾ ಮಂಡಳಿಯ ಸದಸ್ಯೆ ಸುನೀತಮ್ಮ ಸದಾಶಿವಭಟ್ ಅವರನ್ನು ಸನ್ಮಾನಿಸಲಾಯಿತು. ಲಲಿತ ಭಜನಾ ಮಂಡಳಿಯ ಅಧ್ಯಕ್ಷೆ ವತ್ಸಲ, ಕಾರ್ಯದರ್ಶಿ ಜ್ಯೋತಿ, ಭಾಗ್ಯನಂಜುಂಡಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.