ADVERTISEMENT

‘ನೂತನ ಕಟ್ಟಡಕ್ಕೆ ₹ 1.70 ಕೋಟಿ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:21 IST
Last Updated 24 ಸೆಪ್ಟೆಂಬರ್ 2022, 5:21 IST
ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಚ್.ಆರ್.ಸಂದೇಶ ಹಾಗೂ ನಿರ್ದೇಶಕರು ದೀಪ ಬೆಳಗಿದರು.
ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಚ್.ಆರ್.ಸಂದೇಶ ಹಾಗೂ ನಿರ್ದೇಶಕರು ದೀಪ ಬೆಳಗಿದರು.   

ಆಲ್ದೂರು: ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ಮಾಣ ಹಂತದ ಕಟ್ಟಡದಲ್ಲಿ ಶುಕ್ರವಾರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.

ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಬಿ ವೆಂಕಟೇಶ್ ಗೌಡ ಓದಿದರು. ಸಂಘವು ಒಟ್ಟು ಎಂಟು ಗ್ರಾಮಗಳನ್ನು ಒಳಗೊಂಡಿದ್ದು, 2054 ಮಂದಿ ಸದಸ್ಯರಿದ್ದಾರೆ. ಸಂಘವು ₹ 67.68 ಲಕ್ಷ ನಿವ್ವಳ ಲಾಭ ಗಳಿಸಿದೆ. ನೂತನ ಕಟ್ಟಡದ ಯೋಜನಾ ಮೊತ್ತ ₹ 1.70 ಕೋಟಿ ಆಗಿದ್ದು, ಅಪೆಕ್ಸ್ ಬ್ಯಾಂಕ್‌ನಿಂದ ₹ 5 ಲಕ್ಷ ನೆರವು, ಏಳು ಸದಸ್ಯರಿಂದ ಒಟ್ಟು ₹ 5 ಲಕ್ಷ ನೆರವು ಬಂದಿವೆ ಎಂದರು.

ಸಂಘದ ಅಧ್ಯಕ್ಷ ಎಚ್.ಆರ್.ಸಂದೇಶ ಮಾತನಾಡಿ, ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ಸತತವಾಗಿ ಮೂರು ವರ್ಷಗಳಿಂದ ಷೇರು ಡಿವಿಡೆಂಡ್‌ ದೇಣಿಗೆಯಾಗಿ ನೀಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷ ಎಚ್.ಕೆ. ಪಾಯಣ್ಣ, ನಿರ್ದೇಶಕರಾದ ಎಚ್.ಎಸ್. ಕವೀಶ್, ಎಚ್.ಪಿ. ನಾರಾಯಣಗೌಡ, ಡಿ.ಆರ್. ದಿಲೀಪ್ ಕುಮಾರ್, ಎಚ್.ಎ. ನಾರಾಯಣ, ಡಿ.ಎಂ. ವಿನೋದ, ಡಿ.ಎಸ್. ರೇಖಾ ಈರೇಗೌಡ, ಕೆ.ಆರ್. ಪರಮೇಶ್, ಡಿ.ಎನ್. ನಟೇಶ್, ಚೆನ್ನಪ್ಪ, ಕೆ.ಆರ್.ರಘು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.