
ಚಿಕ್ಕಜಾಜೂರು: ಸಮೀಪದ ಬಿ. ದುರ್ಗ ಹೋಬಳಿಯ ಹಲವೆಡೆ ಶನಿವಾರವೂ ಮಳೆ ಮುಂದುವರಿದಿದ್ದು, ರೈತರು ಸಂತಸಗೊಂಡಿದ್ದಾರೆ.
ಚಿಕ್ಕಜಾಜೂರಿನಲ್ಲಿ ಶನಿವಾರ ಮಧ್ಯಾಹ್ನ ಅರ್ಧ ಗಂಟೆ ಕಾಲ ಬಿರುಸಿನ ಮಳೆಯಾಗಿದ್ದು, ನಂತರ ಸೋನೆ ಮಳೆಯಾಗಿದೆ. ಸಮೀಪದ ಮುತ್ತುಗದೂರು, ಸಾಸಲುಹಳ್ಳ ಹಾಗೂ ಸಾಸಲು ಗ್ರಾಮಗಳಲ್ಲಿ ಸುಮಾರು ಅರ್ಧ ಗಂಟೆಕಾಲ ಬಿರುಸಿನ ಮಳೆಯಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಹದ ಮಳೆಯಾಗಿದ್ದು, ಈಗ ಮತ್ತೆ ಮಳೆಯಾಗಿರುವುದರಿಂದ ಈ ಭಾಗದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸಮೀಪದ ಚಿಕ್ಕಂದವಾಡಿ, ಚಿಕ್ಕಎಮ್ಮಿಗನೂರು, ಹಿರೇಎಮ್ಮಿಗನೂರು ಗ್ರಾಮಗಳಲ್ಲೂ ಅರ್ಧ ಗಂಟೆ ಕಾಲ ಉತ್ತಮ ಮಳೆಯಾಗಿದ್ದು, ಹಳ್ಳಗಳಲ್ಲಿ ನೀರು ಹರಿದು ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.