ಅಪಘಾತದಲ್ಲಿ ಸುಟ್ಟು ಕರಕಲಾಗಿರುವ ಕಂಟೈನರ್
– ಪ್ರಜಾವಾಣಿ ಚಿತ್ರ
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 43 ಶಾಲಾ ಮಕ್ಕಳು, ಮೂವರು ಶಿಕ್ಷಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಬೆಂಗಳೂರು, ಟಿ.ದಾಸರಹಳ್ಳಿಯ ಶಾಲೆಯೊಂದರ ಮಕ್ಕಳು ಬಸ್ ನಲ್ಲಿ ದಾಂಡೇಲಿಗೆ ಪ್ರವಾಸ ಹೊರಟಿದ್ದರು.
ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಅಪಘಾತಕ್ಕೀಡಾದ ಸೀಬರ್ಡ್ ಬಸ್ ಹಿಂದೆಯೇ ಶಾಲಾ ಬಸ್ ಇತ್ತು. ಕಂಟೇನರ್ ಸೀಬರ್ಡ್ ಬಸ್ ಗೆ ಡಿಕ್ಕಿ ಹೊಡೆದ ಕೂಡಲೇ ಶಾಲಾ ಬಸ್ ಚಾಲಕ ಕಂದಕಕ್ಕೆ ಇಳಿಸಿ ಎಡಕ್ಕಿದ್ದ ಸರ್ವೀಸ್ ರಸ್ತೆಗೆ ಬಸ್ ತಿರುಗಿಸುವಲ್ಲಿ ಯಶಸ್ವಿಯಾದರು. ಮಕ್ಕಳು ಸಣ್ಣ ಗಾಯವೂ ಇಲ್ಲದಂತೆ ಅಪಾಯದಿಂದ ಪಾರಾದರು. ಚಾಲಕನ ಸಮಯ ಪ್ರಜ್ಞೆಯಿಂದ ಮಕ್ಕಳ ಪ್ರಾಣ ಉಳಿಯಿತು.
ಶಾಲಾ ಬಸ್ ಕಂದಕಕ್ಕೆ ಇಳಿದ ಕಾರಣ ಮುಂಬದಿ ಜಖಂಗೊಂಡಿದೆ.
'ತಕ್ಷಣ ಇಳಿದ ಶಾಲಾ ಬಸ್ ಚಾಲಕ ಸೀಬರ್ಡ್ ಬಸ್ ನಲ್ಲಿದ್ದ ಕೆಲ ಪ್ರಯಾಣಿಕರನ್ನು ರಕ್ಷಿಸಿದರು' ಎಂದು ಪೊಲೀಸರು ತಿಳಿಸಿದರು.
ಶಾಲಾ ಬಸ್ ಚಾಲಕನಿಗೆ ಸಣ್ಣ, ಪುಟ್ಟ ಗಾಯಗಳಾಗಿವೆ. ಬೇರೆ ಬಸ್ ವ್ಯವಸ್ಥೆ ಮಾಡಿಕೊಂಡು ಮಕ್ಕಳು ಪ್ರವಾಸ ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.