ADVERTISEMENT

ಚಿತ್ರದುರ್ಗದಲ್ಲಿ ಲಸಿಕಾ ಆಂದೋಲನ: ಇಂದಿನಿಂದ ಮತ್ತಷ್ಟು ಚುರುಕು

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 4:44 IST
Last Updated 21 ಜೂನ್ 2021, 4:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿತ್ರದುರ್ಗ: ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ ಲಸಿಕೆ ಸಂಬಂಧ ಎರಡನೇ ಡೋಸ್‌ ಬಾಕಿ ಇರುವಂಥ ಫಲಾನುಭವಿಗಳಿಗೆ ಲಸಿಕೆ ಹಾಕುವ ಆಂದೋಲನ (ವ್ಯಾಕ್ಸಿನ್‌ ಡ್ರೈವ್‌) ಜೂನ್‌ 21ರಿಂದ ಜಿಲ್ಲೆಯಾದ್ಯಂತ ಮತ್ತಷ್ಟು ಚುರುಕು ಪಡೆಯಲಿದೆ ಎಂದು ಆರ್‌ಸಿಎಚ್‌ ಅಧಿಕಾರಿ ಡಾ.ಕುಮಾರಸ್ವಾಮಿ ತಿಳಿಸಿದ್ದಾರೆ.

‘ಆದ್ಯತೆ ಗುಂಪು, ಮುಂಚೂಣಿ ಕಾರ್ಯಕರ್ತರಿಗೆ ಈಗಾಗಲೇ ಲಸಿಕೆ ಹಾಕುವ ಕಾರ್ಯ ಜಾರಿಯಲ್ಲಿದೆ. ಆದರೂ 4 ವಾರಗಳ ನಂತರ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ಪಡೆದವರು ಎರಡನೇ ಡೋಸ್ ಪಡೆಯುವ ಅಗತ್ಯವಿದೆ. ಅದಕ್ಕಾಗಿ 23ರ ವರೆಗೂ ಹಾಕಲು ಒತ್ತು ನೀಡಲಾಗುತ್ತಿದೆ’ ಎಂದು
ತಿಳಿಸಿದ್ದಾರೆ.

‘ಕೋವ್ಯಾಕ್ಸಿನ್-14, 232 ಹಾಗೂ ಕೋವಿಶೀಲ್ಡ್-9,231 ಫಲಾನುಭವಿಗಳು ಎರಡನೇ ಡೋಸ್‍ಗೆ ಬಾಕಿ ಉಳಿದಿದ್ದಾರೆ. ಅಂಥವರ ಪಟ್ಟಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಲಾಗಿದೆ.
ಗ್ರಾಮೀಣ ಭಾಗದ ಜನರಲ್ಲಿ ಇರುವಂಥ ತಪ್ಪು ಕಲ್ಪನೆ ಹೋಗಲಾಡಿಸಿ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು
ತಿಳಿಸಿದ್ದಾರೆ.

ADVERTISEMENT

‘ಎರಡನೇ ಡೋಸ್ ಕೋವಿಶೀಲ್ಡ್ ಪಡೆಯಲು ಇಲ್ಲಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಎಲ್ಲ ತಾಲ್ಲೂಕುಗಳ ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಚಿತ್ರದುರ್ಗದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ, ನ್ಯಾಷನಲ್ ಸ್ಕೂಲ್, ಬಾಲಭವನ ಹಾಗೂ ಕೋವ್ಯಾಕ್ಸಿನ್ ಪಡೆಯಲು ಇಲ್ಲಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.