ADVERTISEMENT

ಕೋಟೆನಾಡಿಗೆ ಡರ್ಮಾಕೊನ್‌ ಸೈಕಲ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:42 IST
Last Updated 29 ಜನವರಿ 2026, 6:42 IST
ಚಿತ್ರದುರ್ಗಕ್ಕೆ ಮಂಗಳವಾರ ಆಗಮಿಸಿದ ಡರ್ಮಾಕೊನ್‌ ಸೈಕಲ್‌ ರ‍್ಯಾಲಿಯನ್ನು ಚರ್ಮ ರೋಗ ವ್ಯೆದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಯೋಗೇಂದ್ರ ಸ್ವಾಗತಿಸಿದರು
ಚಿತ್ರದುರ್ಗಕ್ಕೆ ಮಂಗಳವಾರ ಆಗಮಿಸಿದ ಡರ್ಮಾಕೊನ್‌ ಸೈಕಲ್‌ ರ‍್ಯಾಲಿಯನ್ನು ಚರ್ಮ ರೋಗ ವ್ಯೆದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಯೋಗೇಂದ್ರ ಸ್ವಾಗತಿಸಿದರು   

ಚಿತ್ರದುರ್ಗ: ಚರ್ಮ ವಿಜ್ಞಾನವನ್ನು ಸಬಲೀಕರಣಗೊಳಿಸುವ ಘೋಷವಾಕ್ಯದೊಂದಿಗೆ ಹುಬ್ಬಳ್ಳಿಯಲ್ಲಿ ಪ್ರಾರಂಭವಾದ ಡರ್ಮಾಕೊನ್‌ ಸೈಕಲ್‌ ರ‍್ಯಾಲಿ ಮಂಗಳವಾರ ನಗರಕ್ಕೆ ಆಗಮಿಸಿತು.

ಕೋಟೆ ಆವರಣದಲ್ಲಿ ರ‍್ಯಾಲಿಯನ್ನು ಚರ್ಮ ರೋಗ ವ್ಯೆದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಯೋಗೇಂದ್ರ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು, ‘ಆರೋಗ್ಯಕರ ಚರ್ಮ,ದೇಹ ಹಾಗೂ ರಾಷ್ಟ್ರಕ್ಕಾಗಿ ಪುಣೆಯ ಚರ್ಮ ರೋಗ ತಜ್ಞ ವೈದ್ಯ ಡಾ.ನರೇಂದ್ರ ಪಟವರ್ಧನ ತಂಡ ಸೈಕಲ್‌ ರ‍್ಯಾಲಿ ನಡೆಸುತ್ತಿದೆ. ಜ. 21ರಂದು ಹುಬ್ಬಳ್ಳಿಯಲ್ಲಿ ಪ್ರಾರಂಭವಾದ ರ‍್ಯಾಲಿ ಜ. 28ರಂದು ಬೆಂಗಳೂರು ತಲುಪಲಿದೆ’ ಎಂದು ತಿಳಿಸಿದರು.

‘ಜ. 29ರಿಂದ 31ರವರೆಗೆ ಬೆಂಗಳೂರಿನಲ್ಲಿ ಭಾರತೀಯ ಚರ್ಮ, ಲೈಂಗಿಕ ಮತ್ತು ಕುಷ್ಠ ರೋಗ ಸಂಘದ (ಐಏಡಿವಿಎಲ್‌) ವಾರ್ಷಿಕ ಸಮ್ಮೇಳನ ನಡೆಯಲಿದೆ. ರ‍್ಯಾಲಿ ಮೂಲಕ ಚರ್ಮ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ADVERTISEMENT

ರ‍್ಯಾಲಿ ತುಮಕೂರಿಗೆ ಪ್ರಯಾಣ ಬೆಳೆಸಿತು. ತಂಡದ ಸದಸ್ಯರಾದ ಸ್ವಪ್ನಲಿ ಗುಪ್ತೆ, ಭೂಷಣ ಆಪ್ಟೆ, ರವಿ ಬೇಂದ್ರೆ, ನಿತಿನ್‌ ದಾಮ್ಲೆ, ವಿಶ್ವನಾಥ ಗೋಖಲೆ, ಅನಿಲ ಜಮ್ತಾನಿ, ಮಕರಂದ ಸಾನೆ, ಪ್ರಕಾಶ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.