ADVERTISEMENT

ಹೊಸದುರ್ಗ: ರೈತರು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ನಾಟಿಕೋಳಿ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:08 IST
Last Updated 17 ಜೂನ್ 2025, 15:08 IST
ಹೊಸದುರ್ಗದ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಅವರು ನಾಟಿಕೋಳಿ ಮರಿಗಳನ್ನು ವಿತರಿಸಿದರು
ಹೊಸದುರ್ಗದ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಅವರು ನಾಟಿಕೋಳಿ ಮರಿಗಳನ್ನು ವಿತರಿಸಿದರು   

ಹೊಸದುರ್ಗ: ಗ್ರಾಮೀಣ ಭಾಗದ ಜನರ ಆರ್ಥಿಕ ಸಬಲೀಕರಣಕ್ಕಾಗಿ ನಾಟಿಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ನಾಟಿಕೋಳಿ ಸಾಕಾಣಿಕೆ ರೈತರ ಆದಾಯ ಹೆಚ್ಚಿಸುತ್ತದೆ. ಮೊಟ್ಟೆ ಸೇವನೆಯಿಂದ ಆರೋಗ್ಯವೂ ವೃದ್ಧಿಸುತ್ತದೆ ಎಂದು ಮುಖ್ಯ ಪಶುವೈದ್ಯಾಧಿಕಾರಿ ಕಿರಣ್ ಎಚ್.ಎಂ. ಹೇಳಿದರು.

ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ವತಿಯಿಂದ ಗ್ರಾಮೀಣ ರೈತ ಮಹಿಳೆಯರಿಗೆ 20 ನಾಟಿಕೋಳಿ ಮರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಟಿಕೋಳಿ ಮರಿಗಳನ್ನು ವಿತರಿಸಲು ಅರ್ಜಿ ಕರೆಯಲಾಗಿತ್ತು. ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಪ.ಜಾತಿಯವರಿಗೆ 60, ಪಂಗಡದವರಿಗೆ 60 ಹಾಗೂ ಸಾಮಾನ್ಯ ವರ್ಗದವರಿಗೆ ತಲಾ 20 ಮರಿಗಳನ್ನು ತಾಲ್ಲೂಕಿನಾದ್ಯಂತ ವಿತರಿಸಲಾಗಿದೆ ಎಂದು ಹೇಳಿದರು.

ಜಾನುವಾರು ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಮುಖ್ಯ ಪಶುವೈದ್ಯಾಧಿಕಾರಿ ದಾಸಯ್ಯ, ಪಶು ವೈದ್ಯಕೀಯ ಪರಿವೀಕ್ಷಕ ದೇವರಾಜ್ , ಪಶು ವೈದ್ಯಾಧಿಕಾರಿ ಕೆ.ಎಂ. ಬಸವರಾಜ್, ಮುಖಂಡರಾದ ನಿರಂಜನಮೂರ್ತಿ ಸೇರಿದಂತೆ ಸಿಬ್ಬಂದಿ ಹಾಗೂ ಫಲಾನುಭವಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT