ಹಿರಿಯೂರು: ತಾಲ್ಲೂಕಿನ ಚಳ್ಳಕೆರೆ ರಸ್ತೆಯಲ್ಲಿನ ಚಿನ್ನಯ್ಯನಹಟ್ಟಿ ಸಮೀಪ ಮಂಗಳವಾರ ಬೈಕ್‌ನಲ್ಲಿ ರೈತರಿಬ್ಬರು ತಾವು ಬೆಳೆದ ಹೂವನ್ನು ಹಿರಿಯೂರು ಮಾರುಕಟ್ಟೆಗೆ ಒಯ್ಯುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಜಡೇಗೊಂಡನಹಳ್ಳಿಯ ಶಿವಾನಂದ (50) ಹಾಗೂ ಹಿಂಬದಿ ಸವಾರ ದೇವರಾಜ (54) ಮೃತಪಟ್ಟವರು. ಬೈಕ್ ಸವಾರ ಶಿವಾನಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ದೇವರಾಜ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕಾಳಿಕೃಷ್ಣ ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.