ADVERTISEMENT

ಹೊಸದುರ್ಗ: ‘ಟಗರು’ ಗಾಡಿಯಲ್ಲಿ ಗಣಪತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 16:01 IST
Last Updated 20 ಸೆಪ್ಟೆಂಬರ್ 2023, 16:01 IST
<div class="paragraphs"><p>ಹೊಸದುರ್ಗದ ಎಂ.ಜಿ ದಿಬ್ಬದಲ್ಲಿ ಟಗರುಗಳನ್ನು ಕಟ್ಟಿದ ಗಾಡಿಯಲ್ಲಿ ಗಣಪತಿ ಮೆರವಣಿಗೆ ನಡೆಸಲಾಯಿತು</p></div>

ಹೊಸದುರ್ಗದ ಎಂ.ಜಿ ದಿಬ್ಬದಲ್ಲಿ ಟಗರುಗಳನ್ನು ಕಟ್ಟಿದ ಗಾಡಿಯಲ್ಲಿ ಗಣಪತಿ ಮೆರವಣಿಗೆ ನಡೆಸಲಾಯಿತು

   

ಹೊಸದುರ್ಗ: ಗಣಪತಿ ಮೆರವಣಿಗೆ ವೇಳೆ ಡಿ.ಜೆ. ಸಂಗೀತಕ್ಕೆ ನೃತ್ಯ ಮಾಡುತ್ತಾ, ಗಣಪತಿಯನ್ನು ಟ್ರ್ಯಾಕ್ಟರ್ ಅಥವಾ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಿ, ವಿಸರ್ಜನೆ ಮಾಡುವುದು ಸಾಮಾನ್ಯ. ಆದರೆ ತಾಲ್ಲೂಕಿನ ಎಂ.ಬಿ.ದಿಬ್ಬ ಗ್ರಾಮದಲ್ಲಿ ಗಣಪತಿ ಕೂರಿಸಿದ್ದ ಗಾಡಿಯನ್ನು ಟಗರಿನ ಮೂಲಕ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.

ಸಣ್ಣದೊಂದು ಗಾಡಿಗೆ ಅಲಂಕೃತ ಟಗರುಗಳನ್ನು ಎರಡು ಕಡೆ ಕಟ್ಟಿ, ಎತ್ತಿನಗಾಡಿಯ ರೀತಿ ತಯಾರು ಮಾಡಲಾಗಿತ್ತು. ಗಾಡಿಯಲ್ಲಿ ಗಣಪತಿಯನ್ನು ಕೂರಿಸಿ ಪ್ರತಿ ಬೀದಿಯಲ್ಲೂ ಮೆರವಣಿಗೆ ನಡೆಸಲಾಯಿತು. ಕರಡೆ ವಾದ್ಯದ ಜೊತೆ ಗಣಪತಿಗೆ ಜೈಕಾರ ಹಾಕುತ್ತಾ ಮಕ್ಕಳು ಸಂಭ್ರಮಿಸಿದರು ಎಂದು ಗ್ರಾಮಸ್ಥ ಲೋಕಪ್ಪ ತಿಳಿಸಿದರು.

ADVERTISEMENT

ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮೆರವಣಿಗೆ ರಾತ್ರಿ 7 ಗಂಟೆಯವರೆಗೆ ನಡೆಯಿತು. ಈ ವಿನೂತನ ಪ್ರಯೋಗಕ್ಕೆ ಗ್ರಾಮಸ್ಥರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.