ADVERTISEMENT

ಗೋಪನಹಳ್ಳಿಯಲ್ಲಿ 8 ಜನ ದಂಪತಿ ನಾಮಪತ್ರ: ಹಿಂದೆ ಸರಿದ 6 ಜನ ಪತಿಯರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 13:21 IST
Last Updated 19 ಡಿಸೆಂಬರ್ 2020, 13:21 IST

ಚಳ್ಳಕೆರೆ: ‌ನಾಮಪತ್ರ ತಿರಸ್ಕೃತವಾದರೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕೈ ತಪ್ಪುತ್ತದೆ ಎಂಬ ಕಾರಣದಿಂದ ತಾಲ್ಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪನಹಳ್ಳಿ ಒಂದನೇ ಬ್ಲಾಕ್‍ನಲ್ಲಿ 4 ಸಾಮಾನ್ಯ ಮೀಸಲು ಸ್ಥಾನಕ್ಕೆ 8 ಜನ ದಂಪತಿ ನಾಮಪತ್ರ ಸಲ್ಲಿಸಿದ್ದು, ಈಗ 6 ಜನ ಪತಿಯರು ನಾಮಪತ್ರ ಹಿಂಪಡೆದಿದ್ದಾರೆ.

ಸಾಮಾನ್ಯ ಮೀಸಲು ಸ್ಥಾನಕ್ಕೆ ಒಟ್ಟು 17 ಜನ ನಾಮಪತ್ರ ಸಲ್ಲಿಸಿದ್ದರು.ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶನಿವಾರ ಉಮೇದುವಾರಿಕೆ ಸಲ್ಲಿಸಿದ್ದ ಎಂಟು ಜನ ದಂಪತಿಯಲ್ಲಿ 6 ಜನ ಪತಿಯರು, ಒಬ್ಬ ಮಹಿಳೆ ನಾಮಪತ್ರ ವಾಪಸ್‌ ಪಡೆದಿದ್ದು, ಒಂದು ಜೋಡಿ ಮಾತ್ರ ಕಣದಲ್ಲಿ ಉಳಿದಿದೆ. 11 ಜನ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಉಮೇಶ್, ಭವಾನಿ ದಂಪತಿ ಕಣದಲ್ಲಿ ಉಳಿದಿದ್ದಾರೆ. 6 ಜನ ಪತಿಯರು ನಾಮಪತ್ರ ವಾ‍‍ಪಸ್‌ ಪಡೆದ ಕಾರಣ ಅವರ ಪತ್ನಿಯರಾದ ರಾಧಮ್ಮ, ತಿಮ್ಮಕ್ಕ, ಲಕ್ಷ್ಮೀ, ಶರಾವತಿ, ಸುಮಿತ್ರಮ್ಮ, ಲತಾ ಸೇರಿ ಒಟ್ಟು 6 ಜನ ಪತ್ನಿಯರು ಅಂತಿಮ ಸ್ಪರ್ಧೆಯಲ್ಲಿದ್ದಾರೆ.ಶರಣಪ್ಪ, ಶಿವಣ್ಣ, ವಾಸುದೇವಮೂರ್ತಿ, ಮಂಜುನಾಥ, ದೇವರಾಜ ಸೇರಿ ಒಟ್ಟು 11 ಜನ ಹುರಿಯಾಳುಗಳು ಅಂತಿಮ ಕಣದಲ್ಲಿದ್ದಾರೆ.
ಸುಮಾ ಎಂಬ ಅಭ್ಯರ್ಥಿ ನಾಮಪತ್ರ ಹಿಂಪಡೆಯುವ ಮೂಲಕ ಪತಿ ದೇವರಾಜ ಅವರನ್ನು ಕಣಕ್ಕಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.