ADVERTISEMENT

ಸಂಪ್ರದಾಯದ ಹೊನ್ನಾರು ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 5:18 IST
Last Updated 15 ಏಪ್ರಿಲ್ 2021, 5:18 IST
ಶ್ರೀರಾಂಪುರ ಹೋಬಳಿ ನಾಯಿಗೆರೆ ಗ್ರಾಮದಲ್ಲಿ ಬುಧವಾರ ಹೊನ್ನಾರು ಆಚರಣೆ ಪ್ರಯುಕ್ತ ಜೋಡೆತ್ತು ಮತ್ತು ನೇಗಿಲಿಗೆ ಪೂಜೆ ಸಲ್ಲಿಸಲಾಯಿತು
ಶ್ರೀರಾಂಪುರ ಹೋಬಳಿ ನಾಯಿಗೆರೆ ಗ್ರಾಮದಲ್ಲಿ ಬುಧವಾರ ಹೊನ್ನಾರು ಆಚರಣೆ ಪ್ರಯುಕ್ತ ಜೋಡೆತ್ತು ಮತ್ತು ನೇಗಿಲಿಗೆ ಪೂಜೆ ಸಲ್ಲಿಸಲಾಯಿತು   

ಶ್ರೀರಾಂಪುರ:ಯುಗಾದಿ ಹಬ್ಬದ ಮರು ದಿನ ಹೋಬಳಿಯಾದ್ಯಂತ ಹಳ್ಳಿಗಳಲ್ಲಿ ರೈತರ ಸಾಂಪ್ರದಾಯಿಕ ಹೊನ್ನಾರು ಆಚರಣೆ ನಡೆಯಿತು.

ಬುಧವಾರ ಬೆಳಿಗ್ಗೆ ಪ್ರತಿ ಹಳ್ಳಿಗಳಲ್ಲಿ ರೈತರು ಜಾನುವಾರು ಮೈ ತೊಳೆದು ಮತ್ತು ಕೃಷಿ ಸಲಕರಣೆಗಳಾದ ನೇಗಿಲು, ನೊಗಗಳನ್ನು ತಂದು ಗ್ರಾಮದ ದೇವಾಲಯದಲ್ಲಿ ಅವುಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಿದರು.

ನೈವೇದ್ಯ ಸಲ್ಲಿಸಿ, ಎತ್ತುಗಳಿಗೂ ನೈವೇದ್ಯ ನೀಡಿದರು. ಪ್ರಸಾದ ವಿತರಣೆಯ ನಂತರ, ರೈತರು ಉತ್ತಮ ಮಳೆ ಬೆಳೆಯಾಗಲೆಂದು ದೇವರಿಗೆ ಮತ್ತು ಭೂಮಿತಾಯಿಗೆ ನಮಸ್ಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.