ADVERTISEMENT

ಪರಶುರಾಂಪುರ: ಗೊರ್ಲತ್ತುನಲ್ಲಿ ಕನಕ ಜಯಂತಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 13:24 IST
Last Updated 31 ಡಿಸೆಂಬರ್ 2023, 13:24 IST
ಪರಶುರಾಂಪುರ ಸಮೀಪದ ಗೊರ್ಲತ್ತು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು
ಪರಶುರಾಂಪುರ ಸಮೀಪದ ಗೊರ್ಲತ್ತು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು   

ಪರಶುರಾಂಪುರ: ಕೇವಲ ಒಂದು ಜಾತಿಯವರು ಪೂಜಿಸುವಂತ ವ್ಯಕ್ತಿತ್ವ ಕನಕದಾಸರದ್ದಲ್ಲ. ಅವರು ಎಲ್ಲರಿಗೂ ಸಲ್ಲುವ ಮಹಾನ್ ದಾರ್ಶನಿಕ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಹೋಬಳಿಯ ಗೊರ್ಲತ್ತು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದವರು ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಆಗಿನ ಕಾಲದಲ್ಲಿಯೇ ಕನಕದಾಸರು ಹೇಳಿದ್ದರು ಎಂದು ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದ ಶ್ರೀ ಹೇಳಿದರು. 

ADVERTISEMENT

ಈಗಿನ ಯುವ ಸಮೂಹ ದಾರ್ಶನಿಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಬದಲು ಮೊಬೈಲ್ ಫೋನ್‌ಗಳ ಹಿಂದೆ ಬಿದ್ದಿದೆ ಎಂದು ಜಾನಪದ ತಜ್ಞ ಕಲಮರಹಳ್ಳಿ ಮಲ್ಲಿಕಾರ್ಜುನ ವಿಷಾದ ವ್ಯಕ್ತಪಡಿಸಿದರು.  

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ, ಉಣ್ಣೆ ಕೈಮಗ್ಗ ನಿಮಗದ ಮಾಜಿ ಆಧ್ಯಕ್ಷ ಎನ್ ಜಯರಾಂ, ಶಿವಲಿಂಗಪ್ಪ ಮಾತನಾಡಿದರು.

ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶಬಾಬು, ನಗರಸಭೆ ಸದಸ್ಯರಾದ ರಾಘವೇಂದ್ರ, ರಮೇಶಗೌಡ, ಮುಖಂಡರಾದ ಮಲ್ಲೇಶಪ್ಪ ಮಹಾಲಿಂಗಪ್ಪ, ಈರಣ್ಣ, ಶಿವಣ್ಣ, ಕೋಟೆಪ್ಪ, ಲಿಂಗರಾಜು ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.