ಚಿರತೆ ಪ್ರತ್ಯಕ್ಷ
ಚಿತ್ರದುರ್ಗ: ನಗರದ ಐತಿಹಾಸಿಕ ಕೋಟೆಯ ಹೆಬ್ಬಂಡೆಯ ಮೇಲೆ ಗುರುವಾರ ಚಿರತೆ ಕಾಣಿಸಿಕೊಂಡ ಕಾರಣ ಪ್ರವಾಸಿಗರು ಕೆಲ ಕಾಲ ಆತಂಕಕ್ಕೆ ಒಳಗಾದರು.
ಗಂಗಾವತಿಯ 50 ಪ್ರವಾಸಿಗರ ತಂಡ ಕೋಟೆ ವೀಕ್ಷಣೆ ಮಾಡಿ ವಾಪಸ್ ಇಳಿಯುವಾಗ ಸಂಜೆ 5.50ರಲ್ಲಿ ಚಿರತೆ ಕಾಣಿಸಿಕೊಂಡಿತು. 6ನೇ ಸುತ್ತಿನ ಕೋಟೆ ಬಾಗಿಲಿನ ಹೆಬ್ಬಂಡೆಯ ಮೇಲೆ ಚಿರತೆ ಕುಳಿತಿತ್ತು. ಸುಮಾರು ಅರ್ಧಗಂಟೆ ಕಾಲ ಚಿರತೆ ಅಲ್ಲಿಯೇ ಕುಳಿತಿತ್ತು. ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ಛಾಯಾಚಿತ್ರ ಕ್ಲಿಕ್ಕಿಸಿಕೊಂಡರು.
‘2 ತಿಂಗಳ ಹಿಂದಷ್ಟೇ ಕೋಟೆಯ ಬನಶಂಕರಿ ಗುಡಿಯ ಬಳಿ ಚಿರತೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಕೋಟೆ ಆವರಣದಲ್ಲಿ ಚಿರತೆ ಭಯ ಸಾಮಾನ್ಯವಾಗಿದೆ‘ ಎಂದು ಪ್ರವಾಸಿ ಮಾರ್ಗದರ್ಶಿ ಮೊಹಿದ್ದೀನ್ ಖಾನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.