ADVERTISEMENT

ಮೊಳಕಾಲ್ಮುರು | ಅಂತರ್ಜಲ ಹೆಚ್ಚಳ ಕಾರ್ಯಕ್ಕೆ ಒತ್ತು: ಶಾಸಕ ಎನ್.ವೈ. ಗೋಪಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:58 IST
Last Updated 24 ಜನವರಿ 2026, 7:58 IST
ಮೊಳಕಾಲ್ಮುರು ತಾಲ್ಲೂಕಿನ ಪಕ್ಕುರ್ತಿಯಲ್ಲಿ ಬುಧವಾರ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎನ್.ವೈ. ಗೋಪಾಲಕೃಷ್ಣ ಶಂಕುಸ್ಥಾಪನೆ ಮಾಡಿದರು.
ಮೊಳಕಾಲ್ಮುರು ತಾಲ್ಲೂಕಿನ ಪಕ್ಕುರ್ತಿಯಲ್ಲಿ ಬುಧವಾರ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎನ್.ವೈ. ಗೋಪಾಲಕೃಷ್ಣ ಶಂಕುಸ್ಥಾಪನೆ ಮಾಡಿದರು.   

ಮೊಳಕಾಲ್ಮುರು: ‘ಅಂತರ್ಜಲ ಹೆಚ್ಚಳ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಚೆಕ್‌ ಡ್ಯಾಂ, ಬ್ಯಾರೇಜ್‌ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.

ತಾಲ್ಲೂಕಿನ ಮಾಚೇನಹಳ್ಳಿ ಬಳಿ ಬುಧವಾರ ₹ 3 ಕೋಟಿ ವೆಚ್ಚದಲ್ಲಿ ಚಿನ್ನಹಗರಿ ಹಳ್ಳದಲ್ಲಿ ನಿರ್ಮಿಸಲಿರುವ ನೂತನ ಚೆಕ್‌ ಡ್ಯಾಂ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದರು.

‘ಚಿನ್ನಹಗರಿ ಮೂಲಕ ಮಳೆಗಾಲದಲ್ಲಿ ಸಾಕಷ್ಟು ನೀರು ಹರಿದು ಆಂಧ್ರಕ್ಕೆ ಹೋಗುತ್ತದೆ. ಇದನ್ನು ತಡೆಯಲು ಈ ಮಾರ್ಗದಲ್ಲಿ ಅನೇಕ ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಬ್ಯಾರೇಜ್‌ ನಿರ್ಮಿಸಿ ನೀರು ನಿಲ್ಲಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ದೇವಸಮುದ್ರ ಹೋಬಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ನೀರಿನ ಲಭ್ಯತೆ ಹೆಚ್ಚಳವಾಗಿದ್ದು, ರೈತರು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಇದೇ ವೇಳೆ ಜಿಲ್ಲಾ ಪಂಚಾಯಿತಿಯಿಂದ ಪಕ್ಕುರ್ತಿಯಲ್ಲಿ ₹ 18.31 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ, ₹ 4 ಲಕ್ಷ ವೆಚ್ಚದ ಹೈಮಾಸ್ಟ್‌ ದೀಪಕ್ಕೆ, ದೋಸರೆಡ್ಡಿ ಗ್ರಾಮದಲ್ಲಿ ₹ 20 ಲಕ್ಷ ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.

ನಂತರ ದೇವಸಮುದ್ರ, ನಾಗಸಮುದ್ರ ಮತ್ತು ಯರ್ಜೇನಹಳ್ಳಿ ಗ್ರಾಮಗಳ ಪರಿಶಿಷ್ಟ ಜಾತಿ, ವರ್ಗದ ಕಾಲೊನಿಗಳಲ್ಲಿ ₹ 18 ಲಕ್ಷ ವೆಚ್ಚದ ಸಿಸಿ ರಸ್ತೆ, ಚರಂಡಿ ಕಾರ್ಯಗಳಿಗೆ ಭೂಮಿಪೂಜೆ ಮಾಡಲಾಯಿತು.

ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಎಇಇ ಎಚ್.‌ ಲಿಂಗರಾಜ್‌, ಮುಖಂಡರಾದ ಜಿ. ಕುಮಾರಸ್ವಾಮಿ, ಜಿ.ಎನ್.‌ ಗೋವಿಂದಪ್ಪ, ಭರತ್‌ ಕುಮಾರ್‌, ದಡಗೂರು ಮಂಜುನಾಥ್‌, ಉಜ್ಜಿನಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.