ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಚಿತ್ರದುರ್ಗ: ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆಯಲಿದೆ ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು.
ತಾಲ್ಲೂಕಿನ ಭರಮಸಾಗರದಲ್ಲಿ ಕಳೆದ 9 ದಿನಗಳಿಂದ ಹುಣ್ಣಿಮೆ ಮಹೋತ್ಸವ ನಡೆಯಿತು. ಬುಧವಾರ ತಡರಾತ್ರಿಯವರೆಗೂ ಸಮಾರೋಪ ಸಮಾರಂಭ ಜರುಗಿತು. ತಡರಾತ್ರಿ 12.50ರಲ್ಲಿ ಸ್ವಾಮೀಜಿ ಮುಂದಿನ ಹುಣ್ಣಿಮೆ ಮಹೋತ್ಸವ ಸ್ಥಳವನ್ನು ಘೋಷಣೆ ಮಾಡಿದರು.
ರಾಜ್ಯದ ವಿವಿಧ ಜಿಲ್ಲೆಯ ಭಕ್ತರು ಹುಣ್ಣಿಮೆ ಮಹೋತ್ಸವ ನಡೆಸಲು ಬೇಡಿಕೆ ಇಟ್ಟಿದ್ದರು. ಈ ಬಾರಿ ದುಬೈನಲ್ಲಿ ನಡೆಸುವ ಬೇಡಿಕೆ ಬಂದಿತ್ತು. ಹೆಚ್ಚಿನ ಭಕ್ತರ ಅಪೇಕ್ಷೆಯಂತೆ ಅಂತಿಮವಾಗಿ ಭದ್ರಾವತಿಯಲ್ಲಿ ಹುಣ್ಣಿಮೆ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ವಾಮೀಜಿ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.