ಜೈಲು (ಪ್ರಾತಿನಿಧಿಕ ಚಿತ್ರ)
ಚಿತ್ರದುರ್ಗ: ಬಾಲಕಿ ಅಪಹರಣ, ಅತ್ಯಾಚಾರ ಆರೋಪ ಸಾಬೀತಾದ ಕಾರಣ ಚಳ್ಳಕೆರೆ ತಾಲ್ಲೂಕು ಬತ್ತಯ್ಯನಹಟ್ಟಿ ಗ್ರಾಮದ ಅಪರಾಧಿ ಪುನೀತ್ ಕುಮಾರ್‌ಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯ 27 ವರ್ಷ ಜೈಲು ಶಿಕ್ಷೆ, ₹ 30,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಅತ್ಯಾಚಾರಕ್ಕೆ 20 ವರ್ಷ ಜೈಲು ಶಿಕ್ಷೆ, ₹ 25,000 ದಂಡ, ಅಪಹರಣ ಮಾಡಿದಕ್ಕೆ 7 ವರ್ಷ ಜೈಲು, ₹ 5,000 ದಂಡ ವಿಧಿಸಲಾಗಿದೆ. 2023ರಲ್ಲಿ ಪುನೀತ್ ಕುಮಾರ್ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದ. ಈ ಕುರಿತು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾದೀಶರಾದ ಗಂಗಾಧರಪ್ಪ ಸಿ ಹಡಪದ ಆದೇಶ ಪ್ರಕಟಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಸರ್ಕಾರದಿಂದ ₹ 4 ಲಕ್ಷ ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ. ಸಂತ್ರಸ್ತೆ ಪರ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.