ಹೊಸದುರ್ಗ: ತಾಲ್ಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮಸ್ಥರು ಗ್ರಾಮದೊಳಗೆ ಅನ್ಯಗ್ರಾಮಸ್ಥರು ಬರದಂತೆ ಗ್ರಾಮಕ್ಕೆ ಬರುವ ದಾರಿಗಳನ್ನು ಬಂದ್ ಮಾಡಿದ್ದಾರೆ. ಈ ಮೂಲಕ ತಮ್ಮಗ್ರಾಮಕ್ಕೆ ಕೊರಾನಾ ವೈರಸ್ ಬಾರದಂತೆ ತಡೆಯಲುಪಣತೊಟ್ಟಿದ್ದಾರೆ.
ಇತರ ಊರುಗಳಲ್ಲಿದ್ದ ಗ್ರಾಮದ ಸುಮಾರು 80 ಜನರುಯುಗಾದಿ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿದ್ದಾರೆ.ಗ್ರಾಮಸ್ಥರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ.
ಊರಿನ ದಾರಿ ಬಂದ್ ಮಾಡಿದ್ದರಿಂದ ನಮಗೆ ಹೊರಗೆ ಒಡಾಡಲು ತೊಂದರೆಯಾಗುತ್ತದೆ ಎಂದು ಕೆಲವರು ಗಲಾಟೆ ಮಾಡಿದರು. ಅಂಥವರಿಗೆ ಕೊರಾನಾದಂಥ ಮಾರಕ ಕಾಯಿಲೆಯಿಂದಾಗುವ ತೊಂದರೆ ಬಗ್ಗೆ ವಿವರಿಸಲಾಯಿತು.ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಇರಬೇಕು ಎಂದು ತಿಳಿಹೇಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.