
ಮೊಳಕಾಲ್ಮುರು: ರಾಜ್ಯಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಫೆ. 23 ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ಎಸ್. ಪರಮೇಶ್ ನೇರ್ಲಹಳ್ಳಿ ಹೇಳಿದರು.
ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಣೆಯಲ್ಲಿ ಮಾತನಾಡಿದರು.
30 ವರ್ಷಗಳಿಂದ ಅನೇಕ ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಸರ್ಕಾರಗಳು ಬರೀ ಭರವಸೆ ನೀಡಿವೆ. ಈಗ ಜಾರಿ ಮಾಡುವ ಸನ್ನಿವೇಶ ಉಂಟಾಗಿದ್ದರೂ ಮೀನಾಮೇಷ ಎಣಿಸಲಾಗುತ್ತಿದೆ. ಆದ್ದರಿಂದ ಒತ್ತಡ ಹೇರಲು ಸಚಿವರ ಮನೆ ಎದುರು ಧರಣಿ ಆಯೋಜಿಸಲಾಗಿದೆ. ಅಂದು ರಾಜ್ಯದ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರ ಕಚೇರಿಗಳ ಎದುರು ಧರಣಿ ನಡೆಯಲಿದೆ ಎಂದು ಹೇಳಿದರು.
‘ಧರಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನಾಂಗದವರು ಭಾಗವಹಿಸುವ ಮೂಲಕ ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸಲು ಕೈಜೋಡಿಸಬೇಕು’ ಎಂದು ಮನವಿ ಮಾಡಲಾಯಿತು.
ಮುಖಂಡರಾದ ಭೀಮನಕೆರೆ ಶಿವಮೂರ್ತಿ, ಕೆ.ಎಸ್. ಸಣ್ಣಯಲ್ಲಪ್ಪ, ನಾಗಸಮುದ್ರ ಮರಿಸ್ವಾಮಿ, ಡಿ.ಕೆ. ಚಂದ್ರಪ್ಪ, ಕೋನಸಾಗರ ರುದ್ರಮುನಿ, ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಹನುಮಂತಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.