ADVERTISEMENT

ವಿದ್ಯಾವಿಕಾಸ ಶಾಲೆ ಮಕ್ಕಳ ಶೇ 100ರ ಸಾಧನೆ

​ಪ್ರಜಾವಾಣಿ ವಾರ್ತೆ
Published 20 ಮೇ 2022, 4:31 IST
Last Updated 20 ಮೇ 2022, 4:31 IST
ಎಂ.ಎಂ. ಪೂರ್ವಿ
ಎಂ.ಎಂ. ಪೂರ್ವಿ   

ನಾಯಕನಹಟ್ಟಿ: ಪಟ್ಟಣದ ವಿದ್ಯಾವಿಕಾಸ ಶಾಲೆಯ ವಿದ್ಯಾರ್ಥಿನಿ ಎಂ.ಎ. ಪೂರ್ವಿ 625ಕ್ಕೆ 624 ಅಂಕಗಳನ್ನು ಪಡೆ‌ದಿದ್ದಾಳೆ.

ಪರೀಕ್ಷೆ ಬರೆದ 57 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ 100 ಫಲಿತಾಂಶ ದಾಖಲಾಗಿದೆ. ಶಾಲೆಯ ಒಟ್ಟು 57 ವಿದ್ಯಾರ್ಥಿಗಳಲ್ಲಿ 42 ಎ. ಪ್ಲಸ್, 14.ಎ, ಒಬ್ಬ ವಿದ್ಯಾರ್ಥಿ ಬಿ.ಶ್ರೇಣಿಯನ್ನು ಪಡೆದಿದ್ದಾರೆ. ಶಾಲೆ ಸತತ 8ನೇ ವರ್ಷ ಶೇ 100 ಫಲಿತಾಂಶ ದಾಖಲಿಸಿದೆ.

ತಬ್ರೇಜ್ ಅಹಮದ್ (619), ವರ್ಷಿತ ಬಿ.(616), ನವ್ಯ ಎನ್. (616), ರಕ್ಷಿತ ಬಿ.(615), ಸಂಜನ ಸಿ.ವಿ. (615), ಉದಯ ತೇಜ ಸಿ.ಪಿ. (614), ಪೂರ್ವಿಕ ಬಿ.ಜಿ.(614), ಪ್ರದೀಪ್ ಆರ್.ವಿ.ಎಸ್. (610), ಮಹಮದ್ ಇಬ್ರಾಹಿಂ (608) ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ADVERTISEMENT

ಗಣಿತದಲ್ಲಿ 11 ವಿದ್ಯಾರ್ಥಿಗಳು 100ಕ್ಕೆ 100, ಸಮಾಜ ವಿಜ್ಞಾನದಲ್ಲಿ 16 ವಿದ್ಯಾರ್ಥಿಗಳು 100, ಇಂಗ್ಲಿಷ್‌ನಲ್ಲಿ 6 ವಿದ್ಯಾರ್ಥಿಗಳು 100, ಹಿಂದಿಯಲ್ಲಿ 4 ವಿದ್ಯಾರ್ಥಿಗಳು, ಕನ್ನಡದಲ್ಲಿ ಒಬ್ಬ ವಿದ್ಯಾರ್ಥಿನಿ 125ಕ್ಕೆ 125 ಅಂಕಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.