ADVERTISEMENT

ಮೊಳಕಾಲ್ಮುರು | ಫಲಿತಾಂಶ ವೃದ್ಧಿಗೆ ಪಾಲಕರ ಸಹಕಾರ ಅಗತ್ಯ: ಎಂ.ಆರ್.‌ ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:21 IST
Last Updated 18 ಜನವರಿ 2026, 6:21 IST
ಮೊಳಕಾಲ್ಮುರಿನಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಮುಖ್ಯಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡಿಡಿಪಿಐ ಎಂ.ಆರ್.‌ ಮಂಜುನಾಥ್‌ ಉದ್ಘಾಟಿಸಿದರು.
ಮೊಳಕಾಲ್ಮುರಿನಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಮುಖ್ಯಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡಿಡಿಪಿಐ ಎಂ.ಆರ್.‌ ಮಂಜುನಾಥ್‌ ಉದ್ಘಾಟಿಸಿದರು.   

ಮೊಳಕಾಲ್ಮುರು: ‘ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾಲಕರ ಸಹಕಾರವನ್ನೂ ಪಡೆಯುವ ಅಗತ್ಯವಿದೆ’ ಎಂದು ಡಿಡಿಪಿಐ ಎಂ.ಆರ್.‌ ಮಂಜುನಾಥ್‌ ಸಲಹೆ ಮಾಡಿದರು.

ಇಲ್ಲಿನ ಪಿಎಂಶ್ರೀ ಆದರ್ಶ ಕೇಂದ್ರೀಯ ವಿದ್ಯಾಲಯದಲ್ಲಿ ಶನಿವಾರ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ತಾಲ್ಲೂಕಿನ ಮುಖ್ಯಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ಇರಬಹುದಾದ ಕಲಿಕಾ ನ್ಯೂನ್ಯತೆಗಳನ್ನು ಗುರುತಿಸಿ ಪಾಲಕರ ಗಮನಕ್ಕೆ ತರಬೇಕು. ಮನೆಯಲ್ಲಿ ಮೊಬೈಲ್‌, ಟಿವಿ ಹಾವಳಿಯಿಂದ ದೂರ ಇಡುವಂತೆ ಮನವರಿಕೆ ಮಾಡಿಕೊಡಬೇಕು. ಮನೆಯಲ್ಲಿ ಓದುವ ವಾತಾವರಣ ನಿರ್ಮಾಣ ಮಾಡುವ ಮೂಲಕ ಸಹಕಾರ ನೀಡಬೇಕು ಎಂದು ಮನವೊಲಿಸಬೇಕು. ಪ್ರತಿ ವಿದ್ಯಾರ್ಥಿ ಕನಿಷ್ಠ 40 ಅಂಕಗಳನ್ನು ಗಳಿಸುವ ಗುರಿ ರೂಪಿಸಬೇಕು’ ಎಂದರು.

ADVERTISEMENT

‘ಮುಖ್ಯ ಪರೀಕ್ಷೆಗೆ 60 ದಿನ ಮಾತ್ರ ಬಾಕಿ ಇದ್ದು, ಪೂರ್ಣ ಸಿದ್ಧತಾ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಬೇಕು. ಶಾಲೆಗೆ ಗೈರಾಗುವ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಲಕರಿಗೆ ತಿಳಿ ಹೇಳಬೇಕು. ಕನಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನೂ ಗುರುತಿಸಬೇಕು. ಬಾಕಿ ಇರುವ ಎಲ್ಲ ಪಠ್ಯವನ್ನು ಪೂರ್ಣಗೊಳಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು’ ಎಂದು ಮಂಜುನಾಥ್‌ ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣಾಧಿಕಾರಿ ಇನಾಯತ್‌ ಉಲ್ಲಾ, ಬಿಸಿಯೂಟ ಯೋಜನಾಧಿಕಾರಿ ಎಂ.ಹನುಮಂತಪ್ಪ, ಉಪ ಪ್ರಾಂಶುಪಾಲ ಎಂ.ಮಲ್ಲಿಕಾರ್ಜುನ್‌, ವಿಷಯ ಪರಿವೀಕ್ಷಕರಾದ ನಿತ್ಯಾನಂದ, ಪ್ರಶಾಂತ್‌, ರಂಗನಾಯ್ಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.