ADVERTISEMENT

28 ದೇಶಗಳಲ್ಲಿ ಆಯುರ್ವೇದ: ಡಾ.ಎಂ. ಮೋಹನ ಆಳ್ವ

ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ: ಡಾ.ಎಂ. ಮೋಹನ ಆಳ್ವ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 13:55 IST
Last Updated 23 ನವೆಂಬರ್ 2022, 13:55 IST
ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಅಶ್ವಿನಿ ಶೆಟ್ಟಿ, ಡಾ.ಸಮೀರ್ ಆಲಿ ಮತ್ತು ಡಾ.ಭರತೇಶ್ ಆದಿರಾಜ್ ಅವರಿಗೆ ಧನ್ವಂತರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಅಶ್ವಿನಿ ಶೆಟ್ಟಿ, ಡಾ.ಸಮೀರ್ ಆಲಿ ಮತ್ತು ಡಾ.ಭರತೇಶ್ ಆದಿರಾಜ್ ಅವರಿಗೆ ಧನ್ವಂತರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಮೂಡುಬಿದಿರೆ: ಆಯುರ್ವೇದ ವೈದ್ಯಕೀಯ ಪದ್ಧತಿ ಇಂದು ವಿಶ್ವ ಮಾನ್ಯತೆ ಪಡೆದಿದೆ. ಭಾರತಕ್ಕೆ ಸೀಮಿತವಾಗಿದ್ದ ಆಯುರ್ವೇದವನ್ನು ಇಂದು 28 ದೇಶಗಳಲ್ಲಿ ಚಿಕಿತ್ಸಾ ಪದ್ಧತಿಯಾಗಿ ಬಳಸಲಾಗುತ್ತಿದೆ. ಇದು ಆಯುರ್ವೇದದ ಕ್ರಾಂತಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ಮಂಗಳವಾರ ನಡೆದ ಧನ್ವಂತರಿ ಪೂಜಾ ಮಹೋತ್ಸವ ಮತ್ತು ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಕಳದ ಡಾ.ಭರತೇಶ್ ಆದಿರಾಜ, ಯೆನೆಪೋಯ ವೈದ್ಯಕೀಯ ಕಾಲೇಜಿನ ಶರೀರ ರಚನಾ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅಶ್ವಿನಿ ಎಸ್. ಶೆಟ್ಟಿ, ವಯನಾಡಿನ ಜೀವೆಸ್ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಸಮೀರ್ ಆಲಿ ಅವರಿಗೆ ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ADVERTISEMENT

ಬಿಎಎಂಎಸ್ ಪದವಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕಾಲೇಜಿನ ಅಪರ್ಣಾ ಸುನಿಲ್‌ ಕುಮಾರ್ ಅವರಿಗೆ ಜೀವಕ ಪ್ರಶಸ್ತಿ ಹಾಗೂ ದ್ವಿತೀಯ ಸ್ಥಾನಗಳಿಸಿದ ಡಾ. ಅಕ್ಷತಾ ಗೂಗಟ್ ಅವರಿಗೆ ಆಯುರ್ ವಿಶಾರಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಾಂಶುಪಾಲ ಡಾ. ಸಜಿತ್, ಡೀನ್ ಡಾ. ಪ್ರಶಾಂತ್ ಜೈನ್, ಡಾ.ರವಿ ಪ್ರಸಾದ್ ಹೆಗ್ಡೆ ಇದ್ದರು ಡಾ.ಗೀತಾ ಎಂ.ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.