ADVERTISEMENT

ಕೇಂದ್ರ ಸರ್ಕಾರದಿಂದ ಬಡಜನತೆಗೆ ಅನ್ಯಾಯ: ಶಾಸಕ ಅಶೋಕ್ ರೈ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:02 IST
Last Updated 10 ಫೆಬ್ರುವರಿ 2026, 7:02 IST
ಮನರೇಗಾ ಬಚಾವ್ ಸಂಗ್ರಾಮ ಪಾದಯಾತ್ರೆಗೆ ಶಾಸಕ ಅಶೋಕ್ ರೈ ಅವರು ಮಾಡ್ನೂರು ಗ್ರಾಮದ ಕಾವಿನಲ್ಲಿ ಚಾಲನೆ ನೀಡಿ ಮಾತನಾಡಿದರು
ಮನರೇಗಾ ಬಚಾವ್ ಸಂಗ್ರಾಮ ಪಾದಯಾತ್ರೆಗೆ ಶಾಸಕ ಅಶೋಕ್ ರೈ ಅವರು ಮಾಡ್ನೂರು ಗ್ರಾಮದ ಕಾವಿನಲ್ಲಿ ಚಾಲನೆ ನೀಡಿ ಮಾತನಾಡಿದರು   

ಪುತ್ತೂರು: ಉದ್ಯೋಗ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರ ಪರೋಕ್ಷವಾಗಿ ರದ್ದುಪಡಿಸಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ಅಳಿಸಿ ದೇಶದ ಕಟ್ಟಕಡೆಯ ಬಡವರಿಗೆ ಅನ್ಯಾಯ ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಆರೋಪಿಸಿದರು.

ಸುಳ್ಯದಿಂದ ಮೂಲ್ಕಿವರೆಗೆ ನಡೆಯಲಿರುವ ಮನರೇಗಾ ಬಚಾವ್ ಸಂಗ್ರಾಮ ಪಾದಯಾತ್ರೆಗೆ ಮಾಡ್ನೂರು ಗ್ರಾಮದ ಕಾವಿನಲ್ಲಿ ಚಾಲನೆ ನೀಡಿ ಮಾತನಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಎಂ.ಎಸ್.ಮಹಮ್ಮದ್, ಕೃಷ್ಣಪ್ರಸಾದ್ ಆಳ್ವ, ಫಾರೂಕ್ ಬಾಯಬ್ಬೆ, ಯು.ಟಿ.ತೌಸೀಫ್‌, ನಿಹಾಲ್ ಪಿ. ಶೆಟ್ಟಿ, ಅನ್ವರ್ ಖಾಸಿಂ, ಶ್ರೀಪ್ರಸಾದ್ ಪಾಣಾಜೆ, ಚಂದ್ರಪ್ರಭಾ ಗೌಡ, ಫಾರೂಕ್ ಪೆರ್ನೆ, ಅಖಿಲ್ ಕಲ್ಲಾರೆ ಭಾಗವಹಿಸಿದ್ದರು.

ADVERTISEMENT