ADVERTISEMENT

ಮಂಗಳೂರು | ವಾರದ ಲಾಕ್‌ಡೌನ್ ಆರಂಭ, ಖರೀದಿಗೆ ಕಾಣದ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 4:43 IST
Last Updated 16 ಜುಲೈ 2020, 4:43 IST
ಮಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದು ಗ್ರಾಹಕರು ಅತೀ ವಿರಳವಾಗಿರುವ ದೃಶ್ಯಗಳು ಕಂಡು ಬಂದವು –ಪ್ರಜಾವಾಣಿ ಚಿತ್ರಗಳು/ ಗೋವಿಂದರಾಜ ಜವಳಿ
ಮಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದು ಗ್ರಾಹಕರು ಅತೀ ವಿರಳವಾಗಿರುವ ದೃಶ್ಯಗಳು ಕಂಡು ಬಂದವು –ಪ್ರಜಾವಾಣಿ ಚಿತ್ರಗಳು/ ಗೋವಿಂದರಾಜ ಜವಳಿ   
""

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಗುರುವಾರದಿಂದ ಒಂದು ವಾರದ ಲಾಕ್ ಡೌನ್ ಆರಂಭಗೊಂಡಿದ್ದು, ಬೆಳಿಗ್ಗೆ 8 ರಿಂದ 11 ರತನಕ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ.

ಮೊದಲ ದಿನವಾದ ಗುರುವಾರ ಅಗತ್ಯ ಸಾಮಗ್ರಿಗಳ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಜನ ದಟ್ಟಣೆ ಇರಲಿಲ್ಲ. ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಳೆ ಸುರಿಯುತ್ತಿತ್ತು. ಮಲ್ಲಿಕಟ್ಟೆ, ಕಂಕನಾಡಿ, ಕೇಂದ್ರ ಮಾರುಕಟ್ಟೆ ಸೇರಿದಂತೆ ನಗರದಲ್ಲಿ ಖರೀದಿ ಭರಾಟೆ ವಿರಳವಾಗಿತ್ತು.

ಪೂರ್ವಭಾವಿಯಾಗಿ ಲಾಕ್‌ಡೌನ್ ಘೋಷಣೆ, ಪ್ರತಿನಿತ್ಯ ಖರೀದಿಗೆ ಅವಕಾಶ ಹಾಗೂ ಮಳೆಯ ಕಾರಣ ಗ್ರಾಹಕರ ದಟ್ಟಣೆ ಇಲ್ಲ ಎಂದು ವ್ಯಾಪಾರಸ್ಥರು ಅಭಿಪ್ರಾಯ ಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.