ಬೆಳ್ತಂಗಡಿ: ತಾಲ್ಲೂಕಿನ ಪೆರೋಡಿತ್ತಾಯನ ಕಟ್ಟೆ ಶಾಲೆಯ ಬಳಿ ನಿವಾಸಿ ದಿ.ಸ್ಟ್ಯಾನ್ಲಿ ಡಿಸೋಜ ಅವರ ಪುತ್ರ ಸ್ಟೀಫನ್ (14) ವಿದ್ಯುದಾಘಾತದಿಂದ ಗುರುವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆತ ಬೆಳ್ತಂಗಡಿಯ ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ. ಕ್ರಿಸ್ಮಸ್ ಅಂಗವಾಗಿ ಸಂಜೆ ಮನೆಗೆ ಸಂತಾಕ್ಲಾಸ್ ಬರುವ ಕಾರ್ಯಕ್ರಮ ಇತ್ತು. ಈ ಸಂಬಂಧ ವಿದ್ಯುತ್ ಅಲಂಕಾರ ಮಾಡುವ ವೇಳೆ ಅವಘಡ ನಡೆದಿದೆ.
ಕೆಲವು ವರ್ಷಗಳ ಹಿಂದೆ ಹೆತ್ತವರನ್ನು ಕಳೆದುಕೊಂಡಿದ್ದ ಬಾಲಕ ಅಜ್ಜಿ ಹಾಗೂ ಮಾವನ ಆಶ್ರಯದಲ್ಲಿದ್ದರು. ಘಟನೆ ನಡೆದ ಸಮಯ ಮನೆಯಲ್ಲಿ ಅಜ್ಜಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ. ಬಳಿಕ ಬಂದ ಮಾವ ವಿದ್ಯುತ್ ಸಂಪರ್ಕವನ್ನು ತಪ್ಪಿಸಿದ್ದರು.
ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.