ADVERTISEMENT

ಉಳ್ಳಾಲ| ಮುಖದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕನಿಗೆ ಯಶಸ್ವಿ ಚಿಕಿತ್ಸೆ

ದೇರಳಕಟ್ಟೆ ಕಣಚೂರು ಆಸ್ಪತ್ರೆ ವೈದ್ಯರ ಯಶಸ್ಸು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 11:24 IST
Last Updated 25 ಆಗಸ್ಟ್ 2022, 11:24 IST
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯಕೀಯ ತಂಡದ ಜೊತೆಗೆ ಯುವಕ
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯಕೀಯ ತಂಡದ ಜೊತೆಗೆ ಯುವಕ   

ಉಳ್ಳಾಲ: ಮುಖದ ಅರ್ಬುದ (ಕ್ಯಾನ್ಸರ್‌)ದಿಂದ ಆಹಾರಸೇವನೆ ಮಾತ್ರವಲ್ಲ, ಉಸಿರಾಟಕ್ಕೂ ಪರಿತಪಿಸುತ್ತಿದ್ದ ಕೊಪ್ಪದ 17 ವರ್ಷದ ಬಾಲಕನಿಗೆ ಯಶಸ್ವಿ ಚಿಕಿತ್ಸೆ ನಡೆಸುವ ಮೂಲಕ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ವೈದ್ಯಕೀಯ ದಾಖಲೆ ಬರೆದಿದ್ದು, ಸಂಪೂರ್ಣ ಉಚಿತವಾಗಿ ನಡೆಸುವ ಮೂಲಕ ಮಾನವೀಯತೆಗೆ ಮಾದರಿಯಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಣಚೂರು ಆಸ್ಪತ್ರೆಯ ಕ್ಯಾನ್ಸರ್ ವಿಭಾಗ ಮುಖ್ಯಸ್ಥ ಡಾ. ಗುರುಪ್ರಸಾದ್ ‘ಕೊಪ್ಪದ 17ವರ್ಷದ ಬಾಲಕನಿಗೆ ಕಣ್ಣು, ಮೂಗು, ಕಿವಿ ಎಲ್ಲವನ್ನೂ ಟ್ಯೂಮರ್ ಆವರಿಸಿದ್ದು ಆಹಾರ ಸೇವಿಸುವುದಕ್ಕೂ ಅಸಾಧ್ಯವಾಗಿತ್ತು. ಉಸಿರಾಡಲು ಕಷ್ಟವಾಗುತ್ತಿತ್ತು. ಸುಮಾರು 18 ಸೆಂ. ಮೀ. ಉದ್ದದ ಗಡ್ಡೆ ಬೆಳೆದಿದ್ದು, ಗಂಭೀರ ಪ್ರಮಾಣದಲ್ಲಿ ಕ್ಯಾನ್ಸರ್ ಆವರಿಸಿತ್ತು. ಸಾವಿನ ದವಡೆಯಲ್ಲಿದ್ದ ಬಾಲಕನಿಗೆ ಮರುಜನ್ಮ ಸಿಕ್ಕಿದಂತಾಗಿದೆ’ ಎಂದರು.

ಸರ್ಜನ್ ಡಾ. ರವಿವರ್ಮ ಕೆ., ಡಾ. ಗುರುಪ್ರಸಾದ್, ಡಾ. ನಜೀಬ್, ಡಾ. ಮನೀಷ್ ಶೆಟ್ಟಿ, ಡಾ. ಸಂಭ್ರಮ್, ಡಾ. ಪದ್ಮರಾಜ್, ಡಾ. ಚೇತನ್, ಅರವಳಿಕೆ ವಿಭಾಗ ಮುಖ್ಯಸ್ಥ ಡಾ. ವಿನ್ಸೆಂಟ್ ಮಥಾಯಿಸ್ ತಂಡವು ಯಶಸ್ವಿ ಚಿಕಿತ್ಸೆ ನಡೆಸಿತ್ತು.

ADVERTISEMENT

ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹಿಮಾನ್, ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರೋಹನ್ ಮೋನಿಸ್, ವೈದ್ಯಕೀಯ ಅಧೀಕ್ಷಕ ಡಾ. ಎಂ.ಎಸ್. ಹರೀಶ್ ಶೆಟ್ಟಿ, ಸಾತ್ವಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.