ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಲ್ಲಿ ವಿಶೇಷ ತನಿಖಾ ತಂಡವು ಬುಧವಾರ ಮತ್ತು ಗುರುವಾರ ಶೋಧ ಕಾರ್ಯ ನಡೆಸಿತು. ಎರಡು ದಿನಗಳ ಶೋಧದಲ್ಲಿ ಒಟ್ಟು 7 ತಲೆಬುರುಡೆಗಳು ಮತ್ತು ನೂರಾರು ಮೂಳೆಗಳು ಪತ್ತೆಯಾಗಿದ್ದು, ವಾಕಿಂಗ್ ಸ್ಟಿಕ್, ಚಪ್ಪಲಿ, ಸೀರೆ, ಬಟ್ಟೆಗಳು, ಬ್ಯಾಗ್‌ಗಳು, ಬಾಟಲಿ ಮುಂತಾದ ವಸ್ತುಗಳೂ ಸಿಕ್ಕಿವೆ. ಪತ್ತೆಯಾದ ಮೂಳೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವು ಪುರುಷರದೇ, ಮಹಿಳೆಯರದೇ ಅಥವಾ ಮಕ್ಕಳದೇ ಎಂಬುದು ವರದಿ ಬಂದ ನಂತರವಷ್ಟೇ ತಿಳಿಯಲಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.