ADVERTISEMENT

‘ಗಂಟ್ ಕಲ್ವೆರ್’ ತುಳುಚಿತ್ರ ಬಿಡುಗಡೆ 23ಕ್ಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2025, 12:44 IST
Last Updated 6 ಮೇ 2025, 12:44 IST
ಸುದ್ದಿಗೋಷ್ಠಿಯಲ್ಲಿ ಸುಧಾಕರ್ ಬನ್ನಂಜೆ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಸುಧಾಕರ್ ಬನ್ನಂಜೆ ಮಾತನಾಡಿದರು   

ಮಂಗಳೂರು: ‘ಗಂಟ್ ಕಲ್ವೆರ್’ ತುಳು ಚಲನಚಿತ್ರವು ಮೇ 23 ರಂದು ರಾಜ್ಯದಾದ್ಯಂತ ಬಿಡುಗಡೆ‌ ಆಗಲಿದೆ ಎಂದು ಸಿನಿಮಾದ ನಿರ್ದೇಶಕ, ಚಿತ್ರಕಥೆ, ಸಂಭಾಷಣೆ ಬರೆದಿರುವ ಸುಧಾಕರ ಬನ್ನಂಜೆ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ, ತಮ್ಮ ಲಕ್ಷ್ಮಣ ಕಲಾ ನಿರ್ದೇಶನ, ಕೆ. ಗಿರೀಶ್ ಕುಮಾರ್ ಸಂಕಲನ, ಶಂಕರ್ ರವಿಕಿಶೋರ್ ಛಾಯಾಗ್ರಹಣ, ಪ್ರಶಾಂತ್ ಎಳ್ಳಂಪಳ್ಳಿ ಮತ್ತು ರಾಮದಾಸ್ ಸಸಿಹಿತ್ಲು ಸಹನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ ಎಂದರು. 

ನವೀನ್ ಪಡೀಲ್, ಅರವಿಂದ ಬೋಳಾರ್, ಆರ್ಯನ್ ಶೆಟ್ಟಿ, ಸ್ಮಿತಾ ಸುವರ್ಣ, ಭೋಜರಾಜ್ ವಾಮಂಜೂರು, ಸುಧೀರ್ ಕೊಠಾರಿ, ಉಮೇಶ್ ಮಿಜಾರು, ಸುಂದರ ರೈ ಮಂದಾರ, ಸಂದೀಪ ಶೆಟ್ಟಿ ಮಾಣಿಬೆಟ್ಟು, ಗಿರೀಶ್ ಶೆಟ್ಟಿ ಕಟೀಲು., ನಾಗೇಶ್ ಡಿ ಶೆಟ್ಟಿ , ಕ್ಲಾಡಿ ಡಿಲೀಮಾ, ಸಂಪತ್, ರವಿ ಸುರತ್ಕಲ್, ವಸಂತ ಮುನಿಯಾಲ್, ಯಾದವ ಮಣ್ಣಗುಡ್ಡ, ಪ್ರದೀಪ್ ಆಳ್ವ ಮತ್ತಿತರರು ಅಭಿನಯಿಸಿದ್ದಾರೆ‌. ನಾಯಕ ನಟರಾದ ಅಥರ್ವ ಪ್ರಕಾಶ್, ಶ್ರೀಕಾಂತ ರೈ, ಪ್ರಣವ್ ಹೆಗ್ಡೆ, ಶೈಲೇಶ್ ಕೋಟ್ಯಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು.

ADVERTISEMENT

ಉಮೇಶ್ ಮಿಜಾರ್, ರಾಕೇಶ್ ಆಚಾರ್ಯ, ಆರ್ಯನ್ ಶೆಟ್ಟಿ, ಸುಧಾಕರ ಕುದ್ರೋಳಿ, ಪ್ರಶಾಂತ್ ಆಚಾರ್ಯ, ನಾಗೇಶ್ ಡಿ ಶೆಟ್ಟಿ, ತಮ್ಮ ಲಕ್ಷ್ಮಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.