ಗಿಳಿವಿಂಡು ಸಂಸ್ಥೆ ನೀಡುವ ಆರ್ಥಿಕ ನೆರವು ಯೋಜನೆಯ ಕಾರ್ಯಕ್ರಮ ಈಚೆಗೆ ನಡೆಯಿತು
ಸುರತ್ಕಲ್: ಮಂಗಳೂರಿನ ಗಿಳಿವಿಂಡು ಸಂಸ್ಥೆ ಕನ್ನಡ ನಾಡು–ನುಡಿ, ಕನ್ನಡದ ವಿದ್ಯಾರ್ಥಿಗಳು ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಏಳಿಗೆಗಾಗಿ ಶ್ರಮಿ ಸುತ್ತಿದೆ. ಸವಾಲುಗಳನ್ನು ಎದುರಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವುದಕ್ಕಾಗಿ ‘ಸಿರಿಗನ್ನಡಂ ಗೆಲ್ಗೆ’ ಹೆಸರಿನಲ್ಲಿ ಆರ್ಥಿಕ ನೆರವು ನೀಡು ತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಬಿ.ಶಿವರಾಮ ಶೆಟ್ಟಿ ತಿಳಿಸಿದರು.
ಇಲ್ಲಿನ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಳಿವಿಂಡು ಈಚೆಗೆ ಆಯೋಜಿಸಿದ್ದ ನೆರವು ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಿಳಿವಿಂಡಿನ ಹಳೆ ವಿದ್ಯಾರ್ಥಿಗಳು ವಿದ್ಯಾಭಿಮಾನಿಗಳಿಂದ ಸಂಗ್ರಹಿಸಿದ್ದ ₹1.80 ಲಕ್ಷ ಮೊತ್ತವನ್ನು ವಿದ್ಯಾದಾಯಿನಿ ಸಂಘದ ಆಡಳಿತಕ್ಕೆ ಹಸ್ತಾಂತರಿಸಲಾಯಿತು.
ಹಿಂದು ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ತ್ವಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ನಾಗಪ್ಪ ಗೌಡ ಆರ್. ಮುಖ್ಯ ಅತಿಥಿಯಾಗಿದ್ದರು.
ಗಿಳಿವಿಂಡು ಜೊತೆಕಾರ್ಯದರ್ಶಿಗಳಾದ ಆರ್.ನರಸಿಂಹ ಮೂರ್ತಿ, ವಾಸುದೇವ ಬೆಳ್ಳೆ, ಸದಸ್ಯರಾದ ಪ್ರೊ. ರಮೇಶ್ ಭಟ್, ವಿಶ್ವನಾಥ ಬದಿಕಾನ, ಲಕ್ಷ್ಮಿಪಿ, ಜ್ಯೋತಿ ಚೇಳಾಯ್ರು, ಹಿಂದು ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್, ಜೊತೆಕಾರ್ಯದರ್ಶಿ ಪ್ರಸಿದ್ಧ ಪಿ, ಆಡಳಿತಾಧಿಕಾರಿ ಮೃದುಲಾ, ಪ್ರಮುಖರಾದ ಉಮಾದೇವಿ, ಕಸ್ತೂರಿ ಪಿ, ಮುಖ್ಯ ಶಿಕ್ಷಕಿ ಶಾಂತ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಸಂತ್, ಶಶಿಕುಮಾರ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ ಆಚಾರ್, ಜಯರಾಮ್ ಶ್ರೀಯಾನ್, ಗುರುರಾಜ್, ಹರೀಶ್ ಪೇಜಾವರ, ಶ್ರೀನಿವಾಸ್ ರಾವ್ ಮತ್ತು ಮೀನಾಕ್ಷಿ ಐತಾಳ್, ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಸುನೀತಾ ಕೆ ಪಾಲ್ಗೊಂಡಿದ್ದರು. ಶ್ರೀಧರ್ ಟಿ.ಎನ್ ಸ್ವಾಗತಿಸಿದರು. ಕೃಷ್ಣಮೂರ್ತಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.