ಮಂಗಳೂರು: ದುಬೈನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯೊಬ್ಬಳಿಂದ ₹1.10 ಕೋಟಿ ಮೌಲ್ಯದ 2.41 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಗುಪ್ತಚರ ಮಾಹಿತಿಯಂತೆ ಕಾಸರಗೋಡಿನ ಮಹಮ್ಮದ್ ಅಲಿ ಸಮೀರಾಳನ್ನು ತಪಾಸಣೆ ಮಾಡಲಾಯಿತು. ಸ್ಯಾನಿಟರಿ ಪ್ಯಾಡ್, ಒಳ ಉಡುಪಿನಲ್ಲಿ ಅಡಗಿಸಿ ಇಡಲಾಗಿದ್ದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ವಿದೇಶಿ ಸಿಗರೇಟ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಕಸ್ಟಮ್ಸ್ ಉಪ ಆಯುಕ್ತ ಡಾ.ಕಪಿಲ್‌ಗಡೆ ನೇತೃತ್ವದಲ್ಲಿ ಅಧಿಕಾರಿಗಳಾದ ಪ್ರೀತಿ ಸುಮಾ, ರಾಕೇಶ್ ಕುಮಾರ್, ಕ್ಷತಿನಾಯಕ್ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.