ADVERTISEMENT

ಸೀಮಂತಕ್ಕೆ ಹೆಲಿಕಾಪ್ಟರ್‌ನಿಂದ ಹೂಮಳೆ: ಪತ್ನಿಗೆ ಅಚ್ಚರಿ ಉಡುಗೊರೆ ನೀಡಿದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 12:43 IST
Last Updated 26 ಫೆಬ್ರುವರಿ 2026, 12:43 IST
<div class="paragraphs"><p>ಹೆಲಿಕಾಪ್ಟರ್‌ನಿಂದ ಹೂಮಳೆ</p></div>

ಹೆಲಿಕಾಪ್ಟರ್‌ನಿಂದ ಹೂಮಳೆ

   

ಮಂಗಳೂರು: ಇಲ್ಲೊಬ್ಬರು ಉದ್ಯಮಿ ತನ್ನ ಪತ್ನಿ ಸೀಮಂತ ಕಾರ್ಯಕ್ರಮದ ಸಂದರ್ಭದಲ್ಲಿ ಆಕೆಯ ಮೇಲೆ ಹೆಲಿಕಾಪ್ಟರ್‌ನಿಂದ ಹೂಮಳೆಗೆರೆಯುವ ಮೂಲಕ ವಿಶೇಷ ಉಡುಗೊರೆ ನೀಡಿದರು.

ನಗರದ ಹೊರವಲಯದ ‘ಅಡ್ಯಾರ್‌ ಗಾರ್ಡನ್‌’ನಲ್ಲಿ ಉದ್ಯಮಿ ಪ್ರಕಾಶ್‌ ಕುಂಪಲ ಅವರ ಪತ್ನಿ ಅರ್ಪಿತಾ ಅವರ ಸೀಮಂತ ಸಮಾರಂಭ ಗುರುವಾರ ಏರ್ಪಡಾಗಿತ್ತು. ಈ ಸಮಾರಂಭಕ್ಕೆ ಬಂದವರಿಗೆಲ್ಲ ಅಚ್ಚರಿ ಕಾದಿತ್ತು.

ADVERTISEMENT

ಸೀಮಂತದ ಶಾಸ್ತ್ರಗಳು ನಡೆದ ಬಳಿಕ ಆಗಸದಲ್ಲಿ ದಿಢೀರ್ ಹೆಲಿಕಾಪ್ಟರ್‌ ಕಾಣಿಸಿಕೊಂಡಿತು. ನೋಡುತ್ತಿದ್ದಂತೆಯೇ ಆ ಹೆಲಿಕಾಪ್ಟರ್‌ನಿಂದ ಅರ್ಪಿತಾ ಅವರ ಮೇಲೆ ಹೂಮಳೆ ಸುರಿಸಲಾಯಿತು.

‘ಅರ್ಪಿತಾ ಅವರಿಗಾಗಲೀ ಬಂಧುಗಳಿಗಾಗಲಿ ಈ ವಿಚಾರ ಮೊದಲು ಗೊತ್ತೇ ಇರಲಿಲ್ಲ. ಪತಿ ನೀಡಿದ ಅಚ್ಚರಿಯ ಉಡುಗೊರೆಯಿಂದ ಅರ್ಪಿತಾ ಮಾತ್ರವಲ್ಲ ಸಮಾರಂಭಕ್ಕೆ ಬಂದವರೂ ಸಂಭ್ರಮಪಟ್ಟರು’ ಎಂದು ಪ್ರಕಾಶ್‌ ಕುಂಪಲ ಅವರ ಬಂಧುವೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕಾಶ್‌ ಕುಂಪಲ ಅವರು ಅರ್ಪಿತಾ ಅವರನ್ನು 2019ರಲ್ಲಿ ಮದುವೆಯಾಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.