ADVERTISEMENT

ಪೂರ್ವತಯಾರಿಯಿಂದ ಹಾನಿ ನಿಯಂತ್ರಣ ಸಾಧ್ಯ: ಮುರಲೀಮನೋಹರ ಚೂಂತಾರು

ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಮಳೆಗಾಲದ ಪೂರ್ವ ಸಿದ್ದತಾ ಸಭೆ; ನುರಿತ ಈಜುಗಾರರ ಬಳಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 14:34 IST
Last Updated 1 ಜೂನ್ 2022, 14:34 IST
ಗೃಹರಕ್ಷಕ ಸಿಬ್ಬಂದಿ ಜೊತೆ ಪ್ಲಟೂನ್ ಕಮಾಂಡರ್ ಮಾರ್ಕ್ ಸೇರಾ, ಜಿಲ್ಲಾ ಉಪ ಕಮಾಂಡೆಂಟ್ ರಮೇಶ್, ಜಿಲ್ಲಾ ಕಮಾಂಡೆಂಟ್ ಮುರಲೀ ಮನೋಹರ್ ಚೂಂತಾರು, ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ್ ಮತ್ತು ಸುರತ್ಕಲ್ ಪ್ರಭಾರ ಘಟಕಾಧಿಕಾರಿ ರಮೇಶ್ ಇದ್ದಾರೆ
ಗೃಹರಕ್ಷಕ ಸಿಬ್ಬಂದಿ ಜೊತೆ ಪ್ಲಟೂನ್ ಕಮಾಂಡರ್ ಮಾರ್ಕ್ ಸೇರಾ, ಜಿಲ್ಲಾ ಉಪ ಕಮಾಂಡೆಂಟ್ ರಮೇಶ್, ಜಿಲ್ಲಾ ಕಮಾಂಡೆಂಟ್ ಮುರಲೀ ಮನೋಹರ್ ಚೂಂತಾರು, ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ್ ಮತ್ತು ಸುರತ್ಕಲ್ ಪ್ರಭಾರ ಘಟಕಾಧಿಕಾರಿ ರಮೇಶ್ ಇದ್ದಾರೆ   

ಮಂಗಳೂರು: ಅಪಾಯದ ಮುನ್ಸೂಚನೆ ಇದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡರೆ ಭವಿಷ್ಯದಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಮುರಲೀಮನೋಹರ ಚೂಂತಾರು ಅಭಿಪ್ರಾಯಪಟ್ಟರು.

ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಪ್ರವಾಹದಿಂದ ಅಪಾಯ ಉಂಟಾದರೆ ಜನರ ಜೀವ ಉಳಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ನುರಿತ ಈಜುಗಾರರನ್ನು ಈಗಾಗಲೇ ಪತ್ತೆಮಾಡಲಾಗಿದೆ. ರಕ್ಷಣಾ ತಂಡಗಳನ್ನೂ ರಚಿಸಲಾಗಿದೆ ಎಂದು ತಿಳಿಸಿದ ಅವರು ಪ್ರತಿ ಘಟಕಗಳಲ್ಲಿ ಸಿಬ್ಬಂದಿಯನ್ನು ಗುರುತಿಸಾಗಿದ್ದು ಅವರೆಲ್ಲ ಸಿದ್ಧರಾಗಿಬೇಕು ಎಂದು ಸೂಚಿಸಿದರು.

ADVERTISEMENT

ಮಂಗಳೂರು ತಾಲ್ಲೂಕಿನ ಸಮುದ್ರ ಕಿನಾರೆಗಳಾದ ಸೋಮೇಶ್ವರ, ಉಳ್ಳಾಲ, ಮೊಗವೀರ ಪಟ್ನ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು, ಸುರತ್ಕಲ್ ಮತ್ತು ಫಾತಿಮಾ ಬೀಚ್‌ಗಳಲ್ಲಿ ತಲಾ ಇಬ್ಬರು ಗೃಹರಕ್ಷಕರನ್ನು ನಿಯೋಜಿಸಲಾಗುವುದು. ನೆರೆ ಕಾಣಿಸಿಕೊಳ್ಳಬಹುದಾದ ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಲ್ಕಿ, ಕಡಬ ಪ್ರದೇಶಗಳಲ್ಲಿ ಗೃಹರಕ್ಷಕರು ಸನ್ನದ್ದರಾಗಿರಬೇಕು ಎಂದು ಸೂಚಿಸಿದ ಅವರು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಾದ್ಯಂತ 60 ಗೃಹರಕ್ಷಕರನ್ನು ಒಳಗೊಂಡ ಪ್ರವಾಹ ರಕ್ಷಣಾ ತಂಡ ರಚಿಸಲಾಗುವುದು ಎಂದರು.

ಜಿಲ್ಲಾ ಉಪ ಕಮಾಂಡೆಂಟ್ ರಮೇಶ್, ಮಂಗಳೂರು ಘಟಕದ ಪ್ಲಟೂನ್ ಕಮಾಂಡರ್ ಮಾರ್ಕ್ ಸೇರಾ, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.