ADVERTISEMENT

ಮಂಗಳೂರು |ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಹಳೆ ವಿದ್ಯಾರ್ಥಿಗಳ ಶೃಂಗಸಭೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 7:10 IST
Last Updated 21 ಆಗಸ್ಟ್ 2025, 7:10 IST
<div class="paragraphs"><p>ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ</p></div>

ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ

   

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯು (ಎಬಿಎಸ್‌ಎಂಐಡಿಎಸ್‌) 'ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಹಳೆ ವಿದ್ಯಾರ್ಥಿಗಳ ಶೃಂಗಸಭೆ 2025' ಅನ್ನು ನಗರದ ಪ್ರಾಂಗಣದಲ್ಲಿ ಇದೇ 21 ರಿಂದ 23 ರವರೆಗೆ ಆಯೋಜಿಸಿದೆ.

ಈ  ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಸಂಸ್ಥೆಯ ಪ್ರಾಂಶುಪಾಲರಾದ ಮಿತ್ರಾ ಶೆಟ್ಟಿ, ‘ಈ ಶೃಂಗಸಭೆಯಲ್ಲಿ  ದೇಶ–ವಿದೇಶಗಳ ಶಿಕ್ಷಣ ತಜ್ಞರು, ವೈದ್ಯರು, ಸಂಶೋಧಕರು, ವಿದ್ಯಾರ್ಥಿಗಳು ಸೇರಿ 1,050 ನೊಂದಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ADVERTISEMENT

900ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈಜ್ಞಾನಿಕ ಪ್ರಬಂಧಗಳನ್ನು ಹಾಗೂ ಅಧ್ಯಾಪಕರು ಮತ್ತು ವೃತ್ತಿಪರರು 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಿ ಪಡಿಸಲಿದ್ದಾರೆ. ದಂತ ವಿಜ್ಞಾನದ ನವೋದ್ಯಮ ಮತ್ತು ಸಂಶೋಧನೆಗಳ ಕುರಿತು ಇದು ಬೆಳಕು ಚೆಲ್ಲಲಿದೆ. ಒಟ್ಟು 250 ಪ್ರಶಸ್ತಿಗಳನ್ನು ನೀಡಲಾಗುತ್ತದೆ. 250 ಗಣ್ಯ ಹಳೆಯ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಲಾಗುವುದು’ ಎಂದರು.  
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಪ್ರಾಂಶುಪಾಲ ರವಿ, ಶಿಶಿರ್ ಶೆಟ್ಟಿ ರಾಹುಲ್ ಭಂಡಾರಿ ಪ್ರಿತೇಶ್ ಶೆಟ್ಟಿ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.