ADVERTISEMENT

ಪಡುಬಿದ್ರಿ: ಕಂಬಳ ಕರೆ ನಿರ್ಮಾಣಕ್ಕೆ ಭೂಮಿಪೂಜೆ

ಎರ್ಮಾಳು ತೆಂಕ ಬಡಾ ಜೋಡುಕರೆ ಕಂಬಳ ಫೆ.28ಕ್ಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:08 IST
Last Updated 25 ಅಕ್ಟೋಬರ್ 2025, 6:08 IST
ಎರ್ಮಾಳು ತೆಂಕ ಬಡಾ ಜೋಡುಕರೆ ಕಂಬಳ ಕರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು
ಎರ್ಮಾಳು ತೆಂಕ ಬಡಾ ಜೋಡುಕರೆ ಕಂಬಳ ಕರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು   

ಪಡುಬಿದ್ರಿ: ಎರ್ಮಾಳು ಶ್ರೀ ಜನಾರ್ದನ ಕಂಬಳ ಸಮಿತಿ ಹಾಗೂ ಎರ್ಮಾಳು ತೆಂಕ ಬಡಾ ಗ್ರಾಮಸ್ಥರ ಸಹಯೋಗದಲ್ಲಿ ನಡೆಯಲಿರುವ ಎರ್ಮಾಳು ತೆಂಕ ಬಡಾ ಜೋಡುಕರೆ ಕಂಬಳದ ಕರೆ ನಿರ್ಮಾಣಕ್ಕೆ ಎರ್ಮಾಳು ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.

ಬೆಳ್ಮಣ್ ವಿಘ್ನೇಶ್ ಭಟ್ ನೇತೃತ್ವದಲ್ಲಿ ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಭಟ್ ಸಹಕಾರದಲ್ಲಿ ಧಾರ್ಮಿಕ ಪೂಜಾ ವಿಧಿಗಳು ನೆರವೇರಿದವು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ವಿ.ಸುನಿಲ್ ಕುಮಾರ್ ಹಾಗೂ ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಕಂಬಳದ ಲಾಂಛನ ಬಿಡುಗಡೆಗೊಳಿಸಿದರು.

ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿ, 2026ರ ಫೆಬ್ರವರಿ 28ರಂದು ಬಡಕೊಟ್ಟು ಬಾಕ್ಯಾರು ಗದ್ದೆಯಲ್ಲಿ ಎರ್ಮಾಳು ತೆಂಕ ಬಡಾ ಜೋಡುಕರೆ ಕಂಬಳಕ್ಕೆ ದಿನಾಂಕ ನಿಗದಿಯಾಗಿದೆ. ಕಂಬಳ ಯಶಸ್ಸಿಗೆ ಗ್ರಾಮಸ್ಥರೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದರು.

ADVERTISEMENT

ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು, ತೆಂಕ ಗ್ರಾಪಂ ಅಧ್ಯಕ್ಷೆ ಸುರೇಖಾ, ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ಉಚ್ಚಿಲ ಚರ್ಚ್ ಧರ್ಮಗುರು ಜಾನ್ ವಿ ಫರ್ನಾಂಡೀಸ್, ಮಸೀದಿ ಧರ್ಮಗುರು ಶರೀಫ್, ಎರ್ಮಾಳು ಕಂಬಳ ಸಮಿತಿ ಕೋಶಾಧಿಕಾರಿ ಪುಚ್ಚೊಟ್ಟು ಬೀಡು ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಜಿ ಶೆಟ್ಟಿ ಎರ್ಮಾಳು, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಬರ್ಪಾಣಿ, ಬಾಲಚಂದ್ರ ಶೆಟ್ಟಿ ಪುಚ್ಚೊಟ್ಟು ಬೀಡು, ಕಂಬಳ ಅಸೋಸಿಯೇಶನ್ ಪ್ರಮುಖರಾದ ವಿಜಯಕುಮಾರ್ ಕಂಗಿನಮನೆ, ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ, ಕೂಳೂರು ಪೊಯ್ಯೆಲು ಪಿ.ಆರ್. ಶೆಟ್ಟಿ, ಅರುಣ್ ಶೆಟ್ಟಿ ಬಜಪೆ, ರವಿಭಟ್ ವುಡ್‌ಲ್ಯಾಂಡ್ಸ್, ಅಶೋಕ್ ಶೆಟ್ಟಿ ಮೂಡಬೆಟ್ಟು, ಅಮರನಾಥ್ ಶೆಟ್ಟಿ, ಸಂತೋಷ್ ಶೆಟ್ಟಿ ಚೊಕ್ಕಾಡಿ, ನಕ್ರೆ ಅಂತೋನಿ ಡಿಸೋಜ, ಬೆಳುವಾಯಿ ಸದಾನಂದ ಶೆಟ್ಟಿ, ವೆಂಕಟೇಶ ನಾವಡ, ಜಗಜೀವನ್ ಚೌಟ, ಕಿಶೋರ್ ಶೆಟ್ಟಿ ಪೇಟೆ ಮನೆ, ವೈ ಶಶಿಧರ ಶೆಟ್ಟಿ, ಜಯರಾಜ್ ಎರ್ಮಾಳು, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಸದಾನಂದ ನಾಯ್ಗರು, ನಿತ್ಯಾನಂದ ಶೆಟ್ಟಿ, ಯಶೋಧರ ಶೆಟ್ಟಿ, ಮನೋಜ್ ಶೆಟ್ಟಿ, ವಿನಯ ಶೆಟ್ಟಿ, ಗಣೇಶ್ ಶೆಟ್ಟಿ ಬರ್ಪಾಣಿ, ಯು.ಸಿ ಶೇಕಬ್ಬ ಇದ್ದರು.