ADVERTISEMENT

ಕಾಸರಗೋಡು: ಗಡಿನಾಡಲ್ಲಿ ಕನ್ನಡ ಕಟ್ಟುವ ಕಾಯಕ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 13:06 IST
Last Updated 2 ನವೆಂಬರ್ 2023, 13:06 IST
ಕಾಸರಗೋಡಿನ ಕೇರಳ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ
ಕಾಸರಗೋಡಿನ ಕೇರಳ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ    

ಕಾಸರಗೋಡು: 'ವಿವಿಧತೆಯನ್ನು ಬೆಸೆದುಕೊಂಡೇ ಕನ್ನಡತನ ಹುಟ್ಟಿಕೊಂಡಿದೆ. ಪರ ಸಂಸ್ಕೃತಿಯ ಜೊತೆಗೆ ಕನ್ನಡವನ್ನು ಕಟ್ಟುವ, ಉಳಿಸುವ ಕಾಯಕ ಗಡಿನಾಡಿನಲ್ಲಿ ನಡೆಯುತ್ತಿದೆ’ ಎಂದು ಕೇರಳ ಕೇಂದ್ರೀಯ ವಿದ್ಯಾಲಯದ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ಸೌಮ್ಯಾ ಎಚ್. ಅಭಿಪ್ರಾಯಪಟ್ಟರು.

ಕನ್ನಡ ವಿಭಾಗದ ‘ಚಂದ್ರಗಿರಿಯ ಮಾತು’ ವಿದ್ಯಾರ್ಥಿ ವೇದಿಕೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ನುಡಿ ಕನ್ನಡ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಧ್ಯಾಪಕ ಗೋವಿಂದರಾಜು, ಕೆ.ಎಂ.ಚೇತನ್ ಮುಂಡಾಜೆ ಮತ್ತಿತರರು ಇದ್ದರು. ವೇದಿಕೆಯ ಸಂಯೋಜಕ ಡಾ.ಪ್ರವೀಣ ಪದ್ಯಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿನ್ ಸ್ವಾಗತಿಸಿದರು. ವಿನಯ್ ನಿರೂಪಿಸಿದರು. ತೇಜಶ್ರೀ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.