ADVERTISEMENT

ಕರ್ಣಾಟಕ ಬ್ಯಾಂಕ್‌ನಿಂದ ಧರ್ಮಸ್ಥಳಕ್ಕೆ ‘ಟೆಂಪೊ ಟ್ರಾವೆಲರ್‌’ ಕೊಡುಗೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:23 IST
Last Updated 30 ಸೆಪ್ಟೆಂಬರ್ 2025, 4:23 IST
ಕರ್ಣಾಟಕ ಬ್ಯಾಂಕ್ ವತಿಯಿಂದ ಧರ್ಮಸ್ಥಳಕ್ಕೆ ‘ಟೆಂಪೊ ಟ್ರಾವೆಲರ್‌’ ವಾಹನವನ್ನು ಸೋಮವಾರ ಕೊಡುಗೆಯಾಗಿ ನೀಡಲಾಯಿತು
ಕರ್ಣಾಟಕ ಬ್ಯಾಂಕ್ ವತಿಯಿಂದ ಧರ್ಮಸ್ಥಳಕ್ಕೆ ‘ಟೆಂಪೊ ಟ್ರಾವೆಲರ್‌’ ವಾಹನವನ್ನು ಸೋಮವಾರ ಕೊಡುಗೆಯಾಗಿ ನೀಡಲಾಯಿತು   

ಉಜಿರೆ: ಕರ್ಣಾಟಕ ಬ್ಯಾಂಕ್ ವತಿಯಿಂದ ಧರ್ಮಸ್ಥಳಕ್ಕೆ ಸೋಮವಾರ ಟೆಂಪೊ ಟ್ರಾವೆಲರ್ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.

ಬ್ಯಾಂಕ್‌ನ ಎಂ.ಡಿ ಮತ್ತು ಸಿಇಒ ರಾಘವೇಂದ್ರ ಶ್ರೀನಿವಾಸ ಭಟ್, ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ವಾದಿರಾಜ ಭಟ್, ಉಡುಪಿ ರಥಬೀದಿ ಶಾಖೆಯ ಹಿರಿಯ ಶಾಖಾ ಪ್ರಬಂಧಕ ಪ್ರಶಾಂತ್ ಎಂ.ರಾವ್ ವಾಹನವನ್ನು ಹಸ್ತಾಂತರಿಸಿದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್.ಸತೀಶ್ಚಂದ್ರ, ಫೋರ್ಸ್ ಮೋಟಾರ್ಸ್ ಸಂಸ್ಥೆಯ ಅಧಿಕಾರಿಗಳಾದ ಜಗದೀಶ್, ಮನೀಶ್, ಆಕಾಶ್ ಸೇಲ್ಸ್ ಭಾಗವಹಿ‌ಸಿದ್ದರು.

ADVERTISEMENT

ಕೊಡುಗೆಯನ್ನು ಸ್ವೀಕರಿಸಿದ ಹೆಗ್ಗಡೆ ಅವರು, ವಾಹನವನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಸೇವಾ ಚಟುವಟಿಕೆಗೆ ಬಳಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.