ADVERTISEMENT

Mangaluru Udupi Manipal Metro: ಕಾರ್ಯಸಾಧ್ಯತೆ ಪರಿಶೀಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:40 IST
Last Updated 6 ಮಾರ್ಚ್ 2025, 15:40 IST
<div class="paragraphs"><p>ನಮ್ಮ ಮೆಟ್ರೊ</p></div>

ನಮ್ಮ ಮೆಟ್ರೊ

   

(ಸಾಂಕೇತಿಕ ಚಿತ್ರ)

ಮಂಗಳೂರು: ಮಂಗಳೂರು– ಉಡುಪಿ– ಮಣಿಪಾಲ ನಡುವೆ ಮೆಟ್ರೊ ರೈಲು ಮಾರ್ಗ ಕಾರಿಡಾರ್ ನಿರ್ಮಾಣದ ಕಾರ್ಯಸಾಧ್ಯತೆ ಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ADVERTISEMENT

64 ಕಿ.ಮೀ ಇಂಟರ್‌ಸಿಟಿ ಮೆಟ್ರೊ ರೈಲು ಪ್ರಾರಂಭಿಸುವ ಸಂಬಂಧ ತಾಂತ್ರಿಕ, ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರವು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ನಿರ್ದೇಶನ ನೀಡಿದೆ. ಈ ಬಗ್ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕಳುಹಿಸಿದೆ.

ಮಂಗಳೂರು– ಉಡುಪಿ ನಡುವೆ ಮೆಟ್ರೊ ಮಾರ್ಗ ನಿರ್ಮಾಣ ಮಾಡಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನದಾಸ ಹೆಗ್ಡೆ ಅವರು ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ‘ಎರಡು ನಗರಗಳ ನಡುವೆ ಮೆಟ್ರೊ ರೈಲು ಸಂಪರ್ಕ ಅಭಿವೃದ್ಧಿಯಾದರೆ, ಇಲ್ಲಿ ದೊಡ್ಡ ಉದ್ದಿಮೆಗಳು ಬರುತ್ತವೆ, ಕರಾವಳಿಯ ಆರ್ಥಿಕತೆ ಹೆಚ್ಚುತ್ತದೆ’ ಎಂದು ಮೋಹನದಾಸ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.