ADVERTISEMENT

ಉಳ್ಳಾಲ | ಚರ್ಮುರಿ ಅಂಗಡಿ ಸಮುದ್ರಪಾಲು: 80 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 8:28 IST
Last Updated 5 ಜುಲೈ 2023, 8:28 IST
   

ಉಳ್ಳಾಲ (ದಕ್ಷಿಣ ಕನ್ನಡ): ಉಳ್ಳಾಲ ಹಾಗೂ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಉಳ್ಳಾಲ ಬೀಚ್ ಬಳಿ ಇದ್ದ ಚರ್ಮುರಿ ಅಂಗಡಿಗಳು ಸಮುದ್ರಪಾಲಾಗಿವೆ.

ಉಚ್ಚಿಲ ಭಾಗದಲ್ಲಿ ಅಲೆಗಳು ಸಮುದ್ರತೀರದ ಮನೆಗಳಿಗೆ ಅಪ್ಪಳಿಸುತ್ತಿವೆ. ಮನೆ ಸುತ್ತಲಿನ ಹಲವು ಮರಗಳು ಸಮುದ್ರಪಾಲಾಗಿವೆ.

ಸಮುದ್ರತೀರದಲ್ಲಿ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಭಾರಿ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.

ADVERTISEMENT

ಉಳ್ಳಾಲ ಬೀಚ್, ಮೊಗವೀರಪಟ್ಣ, ಸುಭಾಷನಗರ, ಕೈಕೋ, ಕಿಲೆರಿಯಾನಗರ, ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ತೀರಗಳಲ್ಲಿ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ.

ಬ್ರೇಕ್ ವಾಟರ್ ಹಾಕಿದ ನಂತರ ಮೊಗವೀರಪಟ್ಣ ತೀರದಲ್ಲಿ ಕಡಲ್ಕೊರೆತ ಕಡಿಮೆಯಾಗಿತ್ತು. ಆದರೆ, ಬುಧವಾರ ಗಾಳಿ ವೇಗವಾಗಿ ಬೀಸುತ್ತಿರುವ ಕಾರಣ ಮೊಗವೀರಪಟ್ಣ, ಉಳ್ಳಾಲ ಬೀಚ್ ಸಮೀಪ ಅಲೆಗಳ ಅಬ್ಬರಕ್ಕೆ ಬೀಚ್ ಬದಿಯಲ್ಲಿದ್ದ ಅಂಗಡಿಗಳು ಸಮುದ್ರಪಾಲಾಗಿವೆ.

ಗಾಳಿಯ ವೇಗದಿಂದಾಗಿ ಸಮುದ್ರ ತೀರದಲ್ಲಿ ನಿಲ್ಲಲು ಸಾಧ್ಯವಾಗದ ಸ್ಥಿತಿಯಿದೆ. ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.