
ಪ್ರಜಾವಾಣಿ ವಾರ್ತೆ
ಬಾಂಬ್ (ಪ್ರಾತಿನಿಧಿಕ ಚಿತ್ರ)
ಕಾಸರಗೋಡು: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಮತದಾನ ನಡೆದ ಗುರುವಾರ ಕಾಸರಗೋಡು ಜಿಲ್ಲಾ ಪಂಚಾಯಿತಿಯ ಬದಿಯಡ್ಕ ಕ್ಷೇತ್ರದ ಎಡರಂಗ ಅಭ್ಯರ್ಥಿ ಪ್ರಕಾಶ್ ಅವರ ಕಾಡ್ರಬೆಳ್ಳಿಯಲ್ಲಿರುವ ಮನೆ ಬಳಿ ನಾಡ ಬಾಂಬ್ ಸ್ಪೋಟವಾಗಿದೆ.
ಎರಡನೇ ಹಾಗೂ ಕೊನೆಯ ಹಂತದ ಮತದಾನ ಕಾಸರಗೋಡು ಸೇರಿದಂತೆ 7 ಜಿಲ್ಲೆಗಳಲ್ಲಿ ಗುರುವಾರ ನಡೆದಿದೆ. ಈ ಸಂದರ್ಭದಲ್ಲಿ ಪ್ರಕಾಶ್ ಮನೆ ಬಳಿ ನಾಡಬಾಂಬ್ ಸ್ಫೋಟಿಸಿದೆ. ಇದರಿಂದ ಸಾಕುನಾಯಿ ಸಾವಿಗೀಡಾಗಿದೆ. ಬೆಳಿಗ್ಗೆ 7 ಗಂಟೆಯ ವೇಳೆ ಸ್ಫೋಟದ ಸದ್ದು ಕೇಳಿ ಆತಂಕಗೊಂಡ ಸುತ್ತಮುತ್ತಲ ನಿವಾಸಿಗಳು ಬಂದು ನೋಡಿದಾಗ ನಾಯಿ ಸತ್ತುಬಿದ್ದಿರುವುದು ಕಾಣಿಸಿದೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದ ಬದಿಯಡ್ಕ ಪೊಲೀಸರು ಮೂರು ನಾಡ ಬಾಂಬ್ ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.