ADVERTISEMENT

ಕೆಐಒಸಿಎಲ್‌ನಿಂದ ₹15 ಲಕ್ಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 16:20 IST
Last Updated 16 ಆಗಸ್ಟ್ 2022, 16:20 IST
‍ಪಣಂಬೂರಿನಲ್ಲಿರುವ ಕೆಐಒಸಿಎಲ್ ಘಟಕದಿಂದ ನೀಡಿದ ಅಗ್ನಿಶಾಮಕ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹಸಿರು ನಿಶಾನೆ ತೋರಿದರು
‍ಪಣಂಬೂರಿನಲ್ಲಿರುವ ಕೆಐಒಸಿಎಲ್ ಘಟಕದಿಂದ ನೀಡಿದ ಅಗ್ನಿಶಾಮಕ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹಸಿರು ನಿಶಾನೆ ತೋರಿದರು   

ಮಂಗಳೂರು: ಪಣಂಬೂರಿನಲ್ಲಿರುವ ಕೆಐಒಸಿಎಲ್ ಪೆಲೆಟ್ ಪ್ಲಾಂಟ್ ಘಟಕಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಭೇಟಿ ನೀಡಿ, ವಿಪತ್ತು ನಿರ್ವಹಣಾ ಕೈಪಿಡಿ ಬಿಡುಗಡೆಗೊಳಿಸಿದರು.

ಮಂಗಳೂರು ನಗರದಲ್ಲಿ ರೆಡ್‌ಕ್ರಾಸ್ ಸೊಸೈಟಿಯ ಕಟ್ಟಡ ನಿರ್ಮಾಣಕ್ಕೆ ₹ 15 ಲಕ್ಷ ಚೆಕ್ ಹಸ್ತಾಂತರಿಸುವ ಸಂಬಂಧ ಮತ್ತು ವಿಪತ್ತು ನಿರ್ವಹಣಾ ವೃತ್ತಿಪರ ವಿಜಯ್ ಕುಮಾರ್ ಮಾರ್ಗದರ್ಶನದಂತೆ ಕೆಐಒಸಿಎಲ್ ಸಿದ್ಧಪಡಿಸಿದ ಕೈಪಿಡಿ ಇದಾಗಿದೆ. ಪೆಲೆಟ್ ಪ್ಲಾಂಟ್ ಘಟಕದ ಕಾರ್ಯ ಮತ್ತು ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗೆ ವಿವರಿಸಲಾಯಿತು. ಸಿಐಎಸ್‌ಎಫ್ (ಅಗ್ನಿಶಾಮಕ) ಸಿಬ್ಬಂದಿಗೆಂದು ಹೊಸದಾಗಿ ಖರೀದಿಸಿರುವ ಅಗ್ನಿಶಾಮಕ ಟೆಂಡರ್ ವಾಹನಕ್ಕೆ ಹಸಿರು ನಿಶಾನೆ ತೋರಿದರು.

ಕೆಐಒಸಿಎಲ್ ವ್ಯವಸ್ಥಾಪಕ ನಿರ್ದೇಶಕ ಟಿ. ಸಾಮಿನಾಥನ್, ಉತ್ಪಾದನೆ ಹಾಗೂ ಯೋಜನೆಗಳ ನಿರ್ದೇಶಕ ಕೆ.ವಿ.ಭಾಸ್ಕರ ರೆಡ್ಡಿ ಇದ್ದರು. ಹಿರಿಯ ವ್ಯವಸ್ಥಾಪಕ ಎಸ್‌. ಮುರುಗೇಶ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.